

ವಿಜಯಪುರ: ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದರೂ ಕೂಡ ಪ್ರವೇಶಾತಿಗೆ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಮೂವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿಎಲ್ಡಿಇ ಸಂಸ್ಥೆಯ ಅಧ್ಯ ಎಂ.ಬಿ. ಪಾಟೀಲರು ಸಹಾಯ ಹಸ್ತ ಚಾಚುವ ಮೂಲಕ ಈ ವಿದ್ಯಾರ್ಥಿಗಳು ವೈದ್ಯರಾಗುವ ಕನಸು ನನಸಾಗಿಸಲು ಆಸರೆಯಾಗಿದ್ದಾರೆ.
ವಿದ್ಯಾರ್ಥಿಗಳ ಕೋರ್ಸಿನ ಸಂಪೂರ್ಣ ವೆಚ್ಚವನ್ನು ಸಚಿವರು ಭರಿಸಲಿದ್ದು, ಮೊದಲ ವರ್ಷಕ್ಕೆ ಅಗತ್ಯವಾದ ಹಣದ ಚೆಕ್ ಅನ್ನು ಶುಕ್ರವಾರ ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿದರು.
ನಂತರ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಮೊದಲು ಬಿಎಲ್ಡಿಇ ವೈದ್ಯಕಿಯ ಕಾಲೇಜಿನಲ್ಲಿ ಶೇ. 10 ರಷ್ಟು ಅಂದರೆ 15 ಸೀಟುಗಳನ್ನು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ, ನೀಟ್ ಜಾರಿಯಾದ ನಂತರ ಅದು ಸಾಧ್ಯವಾಗಲಿಲ್ಲ. ಅಂದಿನಿಂದ ಸದ್ಯದವರೆಗೆ ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಸರ್ಕಾರಿ ಅಥವಾ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಪಡೆದಿರುವ ಜಿಲ್ಲೆಯ ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕಿಯ ಶಿಣಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಕಾಲೇಜಿನ ಟ್ಯೂಷನ್ ಫೀ, ಹಾಸ್ಟೇಲ್, ಊಟದ ಶುಲ್ಕ, ಪಠ್ಯಪುಸ್ತಕಗಳು ಸೇರಿ ಮುಂತಾದ ಖರ್ಚುಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ನೀಡುತ್ತಿದ್ದೇವೆ. ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯರಾಗಬೇಕೆಂಬ ಕನಸು ನನಸಾಗಲು ಈ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ನಂತರ ಸಚಿವರು, ಸಿಂದಗಿ ತಾಲೂಕಿನ ಹಂಚನಾಳ ಗ್ರಾಮದ ಶರಣಮ್ಮ ಬಿರಾದಾರ, ತಿಕೋಟಾ ತಾಲೂಕಿನ ಅರಕೇರಿ ಎಲ್ಟಿ&4 ರ ಪ್ರೀತಿ ನಾಯಕ ಮತ್ತು ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರ ಗ್ರಾಮದ ಅವಿನಾಶ ನಾವಿ ಅವರಿಗೆ ಸಚಿವರು ಎಂಬಿಬಿಎಸ್ ಕೋರ್ಸಿನ ಮೊದಲ ವರ್ಷದ ಪ್ರಥಮ ಕಂತಿನ ಹಣದ ಚೆಕ್ನ್ನು ವಿದ್ಯಾರ್ಥಿಗಳ ಪೋಷಕರಿಗೆ ವಿತರಿಸಿದರು.
ಸಂಸ್ಥೆಯ ನಿರ್ದೇಶಕ ಸುರೇಶಗೌಡ ಪಾಟೀಲ, ಸಂಸ್ಥೆಯ ಆಡಳಿತ ಕಚೇರಿ ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್.ಎಸ್. ಪಾಟೀಲ, ವಿದ್ಯಾರ್ಥಿಗಳ ಪೋಷಕರಾದ ಮಹಾದೇವಿ ಬಿರಾದಾರ, ಪ್ರಕಾಶ ಶಂಕರ ನಾಯಕ, ಲಕ್ಷ$್ಮಣ ನಾವಿ ಹಾಗೂ ಲಕ್ಷಿ$್ಮಬಾಯಿ ನಾವಿ ಮತ್ತಿತರರಿದ್ದರು.