ಕಾನೂನು, ಸುವ್ಯವಸ್ಥೆ ಕಾಪಾಡಲು ಸಹಕರಿಸಿ

Help maintain law and order
ಹುನಗುಂದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಸಿಪಿಐ ಸುರೇಶ ಬೆಂಡಗುಂಬಳ ಮಾತನಾಡಿದರು. ಪಿಎಸ್‌ಐ ಚನ್ನಯ್ಯ ಬೇವೂರ, ಎಸ್.ಆರ್.ನಾಯಕ ಇದ್ದರು.
Published on

ಹುನಗುಂದ : ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯಿಂದ ಹಬ್ಬ ಆಚರಿಸಬೇಕೆಂದು ಸಿಪಿಐ ಸುರೇಶ ಬೆಂಡಗುಂಬಳ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಶುಕ್ರವಾರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಹುನಗುಂದ-ಇಲಕಲ್ಲ ನಗರ ವಿಜಯಮಹಾಂತಪ್ಪ ಮತ್ತು ಮುರ್ತುಜ ಖಾದ್ರಿ ಅವರು ನಡೆದಾಡಿದ ನಾಡು ಇದಾಗಿದೆ. ಹಿಂದು-ಮುಸ್ಲಿಮರು ಒಗ್ಗಟ್ಟಾಗಿ ಶಾಂತಿ, ಸೌಹಾರ್ದದಿಂದ ಬಕ್ರೀದ್ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತರುವ ಕೆಲಸವಾಗಲು ಯಾರೂ ಆಸ್ಪದ ಮಾಡಬಾರದು. ಯಾವುದೇ ಉಹಾಪೋಹದಿಂದ ಅನ್ಯಧರ್ಮಕ್ಕೆ ಧಕ್ಕೆ ಬರದಂತೆ ಮುನ್ನೆಚ್ಚರಿಕೆ ವಹಿಸಿ ಹಬ್ಬವನ್ನು ಆಚರಿಸಬೇಕು.

ಯಾವುದೇ ಕಾರಣಕ್ಕೆ ಅಂತವರು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾದರೆ ಪೊಲೀಸ್ ಇಲಾಖೆಯ 112ಗೆ ಕರೆಮಾಡಬೇಕೆಂದು ತಿಳಿಸಿದರು.

ಹುನಗುಂದ ಪಿಎಸ್‌ಐ ಚನ್ನಯ್ಯ ಬೇವೂರ ಮಾತನಾಡಿ, ಹುನಗುಂದ ಪಟ್ಟಣದ ಜನತೆಯಲ್ಲಿ ಶಾಂತಿ, ಸೌಹಾರ್ದದಿಂದ ನಡೆದುಕೊಳ್ಳುವ ಸಂಸ್ಕೃತಿ ಮೊದಲಿನಿಂದಲೂ ಇದೆ. ಕಾನೂನು- ಸುವ್ಯವಸ್ಥೆಗೆ ತೊಂದರೆ ಬರದಂತೆ ಸಹಕಾರ ನೀಡುತ್ತೀರಿ ಎಂಬ ಭರವಸೆ ಇದೆ. ಎಲ್ಲರೂ ಕೈಜೋಡಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಎಂದರು.

ಕ್ರೈಂ ಪಿಎಸ್‌ಐ ಎಸ್.ಆರ್. ನಾಯಕ, ವಕ್ಫ್ ಬೋರ್ಡ್ ಅಧ್ಯಕ್ಷ ಮೆಹಬೂಬ ಸರಕಾವಸ, ಪುರಸಭೆ ಅಧ್ಯಕ್ಷ ಪರವೇಜ್ ಖಾಜಿ, ಚೇತನ ಮುಕ್ಕಣ್ಣವರ ಮಾತನಾಡಿದರು.

ಪುರಸಭೆ ಸದಸ್ಯರಾದ ಮೈನು ಧನ್ನೂರ, ಅಲ್ತಾಫ್ ಕಲಬುರ್ಗಿ, ಅಲ್ಲಾಭಕ್ಷ ಮಕಾನದಾರ, ಮೆಹಬೂಬ ಧನ್ನೂರ, ಚಂದ್ರು ತಳವಾರ, ಮಲ್ಲು ಚೂರಿ, ಮಹಾಂತೇಶ ಮದರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net