ದೇವಸ್ಥಾನಗಳ ಜೀಣೋದ್ಧಾರಕ್ಕೆ ನೆರವು

SHREE DHAGRAYO
Published on

ರಟ್ಟಿಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶೈಕ್ಷಣಿಕ, ಆರೋಗ್ಯ ಸೇರಿ ಅನೇಕ ಸಮಾಜಮುಖಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಹಲವಾರು ದೇವಸ್ಥಾನಗಳ ಜೀಣೋದ್ಧಾರಕ್ಕೆ ಅನುದಾನ ಮಂಜೂರು ಮಾಡಲಾಗಿದೆ ಎಂದು ಯೋಜನೆ ಮೇಲ್ವಿಚಾರಕ ಮಂಜುನಾಥ ಹೇಳಿದರು.

ತಾಲೂಕಿನ ಸರ್ವಜ್ಞನ ಮಾಸೂರು ಗ್ರಾಮದಲ್ಲಿ ನಿರ್ವಣವಾಗುತ್ತಿರುವ ಗಂಗಾ ಪರಮೇಶ್ವರಿ ದೇವಸ್ಥಾನಕ್ಕೆ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1.5 ಲಕ್ಷ ರೂಪಾಯಿ ಅನುದಾನದ ಚೆಕ್ ಹಸ್ತಾಂತರ ಮಾಡಿ ಅವರು ಮಾತನಾಡಿದರು.

ಮಾಸೂರು ಗ್ರಾಮವು ತ್ರಿಪದಿ ಕವಿ ಸರ್ವಜ್ಞನ ಜನ್ಮಸ್ಥಳ ಎಂದು ಪ್ರಖ್ಯಾತಿ ಪಡೆದಿದೆ. ಈ ಶ್ರೇಷ್ಠ ವಚನಕಾರರು ನೆಲೆಸಿದ ಈ ಮಣ್ಣಿನಲ್ಲಿ ನಾವೆಲ್ಲರೂ ಸಮಾಜಮುಖಿ ಕಾರ್ಯಗಳ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡುತ್ತಿದ್ದೇವೆ. ಸರ್ವಜ್ಞನ ಪ್ರಾಧಿಕಾರ ಶೀಘ್ರವೇ ಅನುಷ್ಠಾನಕ್ಕೆ ಬರಲಿ. ಗಂಗಾ ಪರಮೇಶ್ವರಿ ದೇವಸ್ಥಾನ ನಿರ್ಮಾಣ ಶೀಘ್ರವೇ ಪೂರ್ಣಗೊಂಡು ಆಧ್ಯಾತ್ಮಿಕವಾಗಿ ಜನರಿಗೆ ಸೇವೆ ನೀಡಲಿ ಎಂದರು.

ಕಮಿಟಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ ಮಾತನಾಡಿದರು. ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಗ್ರಾಪಂ ಅಧ್ಯಕ್ಷೆ ಪ್ರೇಮಾ ನಡುವಿನಮನಿ, ಗ್ರಾಪಂ ಸದಸ್ಯರಾದ ಕಾವ್ಯಾ ಹಿತ್ತಲಮನಿ, ನಾರಯಣಪ್ಪ ಗಾಯಕವಾಡ, ವಲಯ ಅಧಿಕಾರಿ ಶ್ರೀನಿವಾಸ, ಸೇವಾ ಪ್ರತಿನಿಧಿ ಅನುರಾಧ, ಕೃಷ್ಣಪ್ಪ ಪೈಂಟರ್, ಪ್ರಭು ನಡುವಿನಮನಿ, ಮಹಿಳಾ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net