

ಬೆಂಗಳೂರು: ಸಂಧ್ಯಾಶ್ರೀ ಯೋಜನೆಯು ವೃದ್ಧಾಪ್ಯದಲ್ಲಿರá-ವವರಿಗೆ ಆರ್ಥಿಕ ಸಹಾಯ ನೀಡುವುದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಏರ್ಪಡಿಸಿದ್ದ ‘ಸಂಧ್ಯಾಶ್ರೀ’, ‘ವಿದ್ಯಾರ್ಥಿಮಿತ್ರ’, ‘ಅಮರಜ್ಯೋತಿ’ ಯೋಜನೆ ಫಲಾನುಭವಿಗಳಿಗೆ ನೆರವಿನ ಹಸ್ತ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಯವೈಶ್ಯ ಸಮಾಜದ ಈ ವಿನೂತನ ಯೋಜನೆಗಳು ಅವಶ್ಯಕತೆ ಇರುವವರಿಗೆ ಅತ್ಯಂತ ಸಹಕಾರಿಯಾಗಿವೆ. ಸರ್ಕಾರ ಸಹ ಇಂತಹ ಯೋಜನೆಯಡಿ ಅಂದಾಜು 30 ಲಕ್ಷ ಜನರಿಗೆ ಮಾಸಾಶನ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಈ ಮಾಸಾಶನದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
‘ವಿದ್ಯಾರ್ಥಿ ಮಿತ್ರ’ ಯೋಜನೆಯಡಿ ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ 1 ಲಕ್ಷ ರೂ. ಬಡ್ಡಿರಹಿತ ಸಾಲ ಮತ್ತು ಉಚಿತ ಲ್ಯಾಪ್ಟಾಪ್ ವಿತರಿಸುತ್ತಿರುವುದು ಅರ್ಥಪೂರ್ಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಸದಸ್ಯರಿಂದ ಸದಸ್ಯರಿಗಾಗಿ’ ಎನ್ನುವ ತತ್ವದೊಂದಿಗೆ ಪ್ರಾರಂಭಿಸಿರುವ ಅಮರಜ್ಯೋತಿ ಯೋಜನೆಯಲ್ಲಿ ಯಾವುದೇ ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಗರಿಷ್ಠ 5 ಲಕ್ಷ ರೂ.ವರೆಗೆ ನೆರವು ನೀಡಲಾಗುತ್ತದೆ ಎಂದರು.
ಹೃಷಿಕೇಶದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಬ್ರಿಗೇಡ್ ಎಂಟರ್ಪ್ರೖೆಸಸ್ ಮಾಲೀಕ ಸಿಎಂಡಿ ಎಂ.ಆರ್. ಜಯಶಂಕರ್ ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಮತ್ತಿತರರಿದ್ದರು.