

ಶಿರಾ: ವಿದ್ಯೆ ಯಾರು ಕದಿಯಲಾರದ ಸಂಪತ್ತು. ಉಳ್ಳವರು ಸರ್ಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಅನುಕೂಲಕ್ಕಾಗಿ ಸವಲತ್ತುಗಳನ್ನು ನೀಡಿ, ತಮ್ಮದುಡಿಮೆ ಸಾರ್ಥಕತೆ ಪಡಿಸಿಕೊಳ್ಳಬೇಕು ಎಂದು ಸಮಾಜ ಸೇವಕ ಶ್ರೀಕಾಂತ್ ಹೇಳಿದರು.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಯಾದಲಡಕು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಮತ್ತು ಪಠ್ಯ ಸಲಕರಣೆಗಳನ್ನು ಬುಧವಾರ ವಿತರಿಸಿ ಮಾತನಾಡಿ, ನಮ್ಮ ಸ್ನೇಹಿತರು ಎಲ್ಲರೂ ಐಟಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಾರೆ. ದುಡಿಮೆಯಲ್ಲಿ ಅಲ್ಪ ಪಾಲು ಸಮಾಜಮುಖಿ ಸೇವೆಗೆ ಎಂಬ ಭಾವನೆಯೊಂದಿಗೆ ಎಲ್ಲರೂ ಒಗ್ಗೂಡಿ ಯೂಥ್ಫಾರ್ ಸೇವಾ ಎಂಬ ಘೋಷಣೆಯೊಂದಿಗೆ ಇಂತಹ ಸಮಾಜಮುಖಿ ಸೇವೆಯನ್ನು ಮಾಡುತ್ತಿದ್ದೇವೆ. ದಾನಿಗಳು ನೀಡುವ ಶೈಕ್ಷಣಿಕ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದುಪಯೋಗಿಸಿ ಶೈಕ್ಷಣಿಕ ಯಶಸ್ಸು ಸಾಧಿಸಬೇಕು ಎಂದರು.
ಯಾದಲಡಕು ಸರ್ಕಾರಿ ಶಾಲೆಗೆ 6 ರೌಂಡ್ ಟೇಬಲ್, 30 ನಲಿ&ಕಲಿ ಚೇರು, 6 ಟೇಬಲ್, 15.ಡೇಸ್ಕ್ , ಡ್ರಾಂ ಸೇಟ್ ಕೊಡುಗೆಯಾಗಿ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜುನಾಥ್, ಮುಖಂಡರಾದ ಕೊಟ್ಟಿ ಮಂಜುನಾಥ್, ಆರ್.ತಿಪ್ಪೇಸ್ವಾಮಿ, ಶಾಲಾ ಅಭಿವೃದ್ಧಿ ಸಮಿತಿಯ ಲಕ್ಷಿ$್ಮ, ಅತಿಥಿ ಶಿಕ್ಷಕರಾದ ಗಿರೀಶ್, ಸುಮಿತ್ರಾ, ಆಶಾ, ವಿದ್ಯಾರ್ಥಿಗಳು ಇದ್ದರು.