

ಗುರುಪುರ: ಅಸಾವಾನ್ಯ ಬ್ಯಾಕ್ಟೀರಿಯಾ ಸೋಂಕು ಬಾಧಿತ ‘ಲೂಪಸ್’ ಕಾಯಿಲೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 8ನೇ ತರಗತಿ ವಿದ್ಯಾರ್ಥಿನಿ ದೀಪ್ತಿ ಡಿ. ಅವರು ಮುಂದಿನ ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ.
ಮಂಗಳೂರು ಪಚ್ಚನಾಡಿ ಗ್ರಾಮದ ಆಶ್ರಯ ಕಾಲನಿ ನಿವಾಸಿಯಾಗಿರುವ ಮಮತಾ ಮತ್ತು ದೇವರಾಜ್ ದಂಪತಿಯ ಪುತ್ರಿಯಾಗಿರುವ ಈಕೆಗೆ 6 ತಿಂಗಳ ಹಿಂದೆ ವಿಚಿತ್ರ ಕಾಯಿಲೆ ಬಾಧಿಸಿದ್ದು, ಕಿಡ್ನಿ ಮತ್ತು ನರಮಂಡಲ ಸಹಿತ ಬಹುಅಂಗಾಂಗಕ್ಕೆ ಹಾನಿಯುಂಟಾಗಿದೆ. ಬಡ ಕುಟುಂಬದ ದೇವರಾಜ್ ದಂಪತಿಯು ದೀಪ್ತಿಯ ಚಿಕಿತ್ಸೆಗಾಗಿ ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿದ್ದಾರೆ. ರೋಗ ಪೂರ್ಣ ಗುಣಮುಖವಾಗಲು ಇನ್ನೂ ಐದಾರು ತಿಂಗಳ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂದಿನ ಚಿಕಿತ್ಸೆಗಾಗಿ ಇನ್ನೂ ಐದಾರು ಲಕ್ಷ ರೂ. ಅಗತ್ಯವಿದ್ದು, ಕುಟುಂಬವು ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ. ನೆರವಿಗಾಗಿ ದೇವರಾಜ ಕೋಟ್ಯಾನ್ ಅವರ ಖಾತೆ (ಎ/ಸಿ ನಂಬ್ರ : 520291000156294. ಐಎಫ್‌ಎಸ್‌ಸಿ ಕೋಡ್ : ಯುಬಿಐಎನ್ 0905968) ಮೊಬೈಲ್ : 88677 01939 ಅಥವಾ ಮಮತಾ ದೇವರಾಜ್ ಅವರ ಖಾತೆ (ಎ/ಸಿ ನಂಬ್ರ : 110123466711. ಐಎಫ್‌ಎಸ್‌ಸಿ ಕೋಡ್ : ಸಿಎನ್‌ಆರ್‌ಬಿ0000640) ಸಂಪರ್ಕಿಸಬಹುದು.