

ಮಸ್ಕಿ: ಇತ್ತಿಚೀನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಅಪಘಾತಗಳಿಂದ ಸಾವು ಸಂಭವಿಸುತ್ತಿರುವುದು ಹೆಚ್ಚಳವಾಗಿದೆ. ಸಾವಿನಿಂದ ಪಾರಾಗಲು ಪ್ರತಿಯೊಬ್ಬರೂ ಹೆಲ್ಮೆಟನ್ನು ಕಡ್ಡಾಯವಾಗಿ ಧರಿಸಬೇಕೆಂದು ಪಿಎಸ್‌ಐ ತಾರಾಬಾಯಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸರ್ಕಾರ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿದೆ. ಇದರಿಂದ ಚಾಲಕರ ಪ್ರಾಣ ರಕ್ಷಣೆಯ ಉದ್ದೇಶ ಅಡಗಿದೆ. ಹಾಗಾಗಿ ಪ್ರತಿಯೊಬ್ಬ ವಾಹನ ಚಾಲಕರು ಹೆಲ್ಮೆಟ್ ಧರಿಸಬೇಕೆಂದು ಸೂಚನೆ ನೀಡಿದರು.