ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ

19 yelandur 01
Published on

ಯಳಂದೂರು: ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು ಎಂದು ಎಎಸ್‌ಐ ಗೋವಿಂದರಾಜು ಹೇಳಿದರು.

ಪಟ್ಟಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಬೈಕ್ ಸವಾರರಿಗೆ ರಸ್ತೆ ನಿಯಮಗಳ ಅರಿವು ಮೂಡಿಸಿ ಮಾತನಾಡಿದ ಅವರು, ದ್ವಿಚಕ್ರ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡುವುದು ಹಾಗೂ ವ್ಹೀಲಿಂಗ್ ಮಾಡುವುದು ಅಪರಾಧವಾಗಿದೆ. ಬಸ್ ನಿಲ್ದಾಣ, ಆಸ್ಪತ್ರೆ, ಶಾಲೆಗಳಿರುವ ರಸ್ತೆಗಳಲ್ಲಿ ನಿಗದಿತ ಮಿತಿಯ ವೇಗದಲ್ಲಿ ವಾಹನ ಚಾಲನೆ ಮಾಡಬೇಕು. ನಿಗದಿತ ಸ್ಥಳದಲ್ಲೇ ವಾಹನ ಪಾರ್ಕಿಂಗ್ ಮಾಡಬೇಕು. 18 ವರ್ಷ ದಾಟಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ವಾಹನ ಪರವಾನಗಿ ಪಡೆಯಬೇಕು. ಚಿಕ್ಕ ವಯಸ್ಸಿನ ಮಕ್ಕಳಿಗೆ ಪಾಲಕರು ತಮ್ಮ ವಾಹನಗಳನ್ನು ನೀಡಬಾರದು. ಇದು ಕೂಡ ಅಪರಾಧವಾಗಿದ್ದು, ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು. ಮುಖ್ಯಪೇದೆ ಅನ್ಸರ್‌ಪಾಷ, ಮುಖಂಡರಾದ ಡಿ.ಎನ್. ನಟರಾಜು, ವೈ.ಕೆ.ಮೋಳೆ ನಾಗರಾಜು, ಚಕ್ರವರ್ತಿ, ಆನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net