

ಬೈಲಕುಪ್ಪೆ: ಬೈಲಕುಪ್ಪೆ ಪೊಲೀಸ್ ಇಲಾಖೆ ವತಿಯಿಂದ ಪಿರಿಯಾಪಟ್ಟಣ ತಾಲೂಕು ಕಾರ್ಯನಿರ್ತರ ಪತ್ರಕರ್ತರ ಸಂಘದ ಸದಸ್ಯರಿಗೆ ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.
ಬೈಲಕುಪ್ಪೆ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ ಮಾತನಾಡಿ, ತಾಲೂಕು ಸಂಘದ ಸದಸ್ಯರಿಗೆ ಹೆಲ್ಮೆಟ್ ನೀಡುವಂತೆ ಬೈಲಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ಅವರಿಗೆ ಮನವಿ ಮಾಡಿದ ಮೇರೆಗೆ ಇಂದು ಡಿವೈಎಸ್ಪಿ ಗೋಪಾಲಕೃಷ್ಣ ಹಾಗೂ ದೀಪಕ್ ನೇತೃತ್ವದಲ್ಲಿ ಹೆಲ್ಮೆಟ್ ವಿತರಿಸಲಾಗುತ್ತಿದೆ. ಸಂಘದ ಪರವಾಗಿ ಧನ್ಯವಾದ ತಿಳಿಸುವುದಾಗಿ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿವೈಎಸ್ಪಿ ಗೋಪಾಲಕೃಷ್ಣ, ವೃತ್ತ ನಿರೀಕ್ಷಕ ದೀಪಕ್ ಹಾಗೂ ಪಿಎಸ್‌ಐ ಅಜಯ್ ಕುಮಾರ್, ಶಿವಶಂಕರ, ರವಿ ಅವರನ್ನು ಸನ್ಮಾನಿಸಲಾಯಿತು.
ಸಿಬ್ಬಂದಿ ಮಾದೇವಪ್ಪ, ಸುರೇಶ್, ಮುದ್ದುರಾಜ್, ಭಾಸ್ಕರ್, ತಾಲೂಕು ಕಾರ್ಯನಿರ್ತರ ಪತ್ರಕರ್ತರ ಸಂಘದ ಅಧ್ಯಕ್ಷ ರವಿಚಂದ್ರ, ಸದಸ್ಯ ಸ್ವಾಮಿ, ಗಣೇಶ್, ನವೀನ್ ಕುಮಾರ್, ಅಶ್ವತ್, ಶಿವಣ್ಣ, ದೇವೇಗೌಡ, ಅಶೋಕ, ಸದಾ, ಶಿವ, ರಾಜೇಶ್, ಪುನೀತ್, ರಾಮೇಗೌಡ, ಲೋಕೇಶ್, ವಿನಯ್, ಮುಕುಂದ, ವೀರೇಶ ಇತರರು ಇದ್ದರು.