ಕವಿತಾಳ: ಸಮೀಪದ ಹಿರೇದಿನ್ನಿ ಗ್ರಾಮದಲ್ಲಿ ಫೆ.13ರಂದು ಮಾವುರದ ಯಲ್ಲಮ್ಮ ದೇವಿ ಜಾತ್ರೋತ್ಸವ ಜರುಗಲಿದೆ. ಜಾತ್ರೆ ಅಂಗವಾಗಿ ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ನಂತರ ಸಂಗ್ರಾಣಿ ಕಲ್ಲು, ಉಸುಕಿನ ಚೀಲ ಎತ್ತುವ ಸ್ಪರ್ಧೆ ನಡೆಯಲಿದೆ. ಸಂಜೆ ಮಹಾ ರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.