ನುಡಿದಂತೆ ನಡೆದ ರಾಜ್ಯ ಸರ್ಕಾರ

30 ಎಸ್ಕೆಪಿ 1b
ಶಿಕಾರಿಪುರದಲ್ಲಿ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಲ್ಲೇಶ್ ಬಿ.ಪೂಜಾರ್, ಭರತ್, ಹುಲ್ಮಾರ್ ಮಹೇಶ್, ನಗರದ ಮಹದೇವಪ್ಪ. ಪುಷ್ಪಾ ಶಿವಕುಮಾರ್, ಜಯಶ್ರೀ ಹೇಮರಾಜ್, ಗೋಣಿ ಪ್ರಕಾಶ್, ಭಂಡಾರಿ ಮಾಲತೇಶ್ ಇತರರಿದ್ದರು.
Published on

ಶಿಕಾರಿಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದ್ದು ಗೃಹಲಕ್ಷ್ಮೀ ಮಹಿಳೆಯರ ಪಾಲಿನ ವರದಾನವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಹೇಳಿದರು.
ಪಟ್ಟಣದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಗೆ ಮುನ್ನ ನೀಡಿದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಸರ್ಕಾರ ಪೂರೈಸಿದೆ. ರಾಜ್ಯದ ಮಾತೆಯರು, ಸಹೋದರಿಯರು ಕಾಂಗ್ರೆಸ್ ಕೈಹಿಡಿದು ಅಧಿಕಾರಕ್ಕೆ ತಂದಿದ್ದಾರೆ. ಶಕ್ತಿ ಯೋಜನೆಯು ಈಗ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇವತ್ತು ತೀರ್ಥ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸರ್ಕಾರದ ಪರವಾಗಿ ದೇವರಿಗೆ ಪೂಜೆ ಅಭಿಷೇಕ ಮಾಡಿಸುತ್ತಿದ್ದಾರೆ. ಇದುನಮಗೆ ಹಿರಿಮೆ ಎಂದರು.
ದಿವಂಗತ ದೇವರಾಜ ಅರಸು ನಂತರ ಬಡವರ ಪರವಾದ, ಹಿಂದುಳಿದವರ ಪರವಾದ ಜಾತ್ಯತೀತ ಚಿಂತನೆಯ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಜೋಡೆತ್ತಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಕುಟುಂಬವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವವಳು ಗೃಹಿಣಿ. ಅವಳಿಗೆ ಸರ್ಕಾರ ಕೊಡುವ 2000 ರೂ.ಗಳು ಆಸರೆಯಾಗುತ್ತದೆ. ಜತೆಗೆ ಅಕ್ಕಿ ಕೊಡುವುದರಿಂದ ಕಷ್ಟಪಟ್ಟು ಸಂಸಾರ ಸಾಗಿಸುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.
ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಮಾತನಾಡಿ, ಈ ಯೋಜನೆಯು ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾಗಿದ್ದು ಅಧಿಕಾರಿಗಳು ಈ ಯೋಜನೆಯನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಹೇಳಿದುರ.
ಮಾಜಿ ಕಾಡಾ ಅಧ್ಯಕ್ಷ ನಗರದ ಮಹದೇವಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಮಾತನಾಡಿದರು. ಪುರಸಭೆ ಸದಸ್ಯರಾದ ಗೋಣಿ ಪ್ರಕಾಶ್, ಜಯಶ್ರೀ ಹೇಮರಾಜ್, ಸ.ನಾ.ಮಂಜಪ್ಪ. ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಪುಷ್ಪಾ ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ಭರತ್, ತಿಮ್ಮಣ್ಣ, ಕೆ.ವಿ.ಪ್ರಕಾಶ್, ಬನ್ನೂರು ಚರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net