ಹೆಜ್ಜೇನು ದಾಳಿಗೆ ಓರ್ವ ಗಂಭೀರ

Honey Bee
ಸಾಂದರ್ಭಿಕ ಚಿತ್ರ
Published on

ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ವಾಟರ್‌ಟ್ಯಾಂಕ್ ಬಳಿ ಹೆಜ್ಜೇನು ನೊಣಗಳು ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ದಾಳಿ ನಡೆಸಿದ ಪರಿಣಾಮ ಇಮ್ತಿಯಾಜ್ ಎಂಬುವರು ಗಂಭೀರ ಗಾಯಗೊಂಡಿದ್ದು, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಜೇನುನೋಣಗಳ 20ಕ್ಕೂ ಮಿಕ್ಕಿ ಮುಳ್ಳುಗಳನ್ನು ಇಮ್ತಿಯಾಜ್ ದೇಹದಿಂದ ಹೊರತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಹೆಜ್ಜೇನು ನಾಲ್ಕೈದು ಮಂದಿ ಮೇಲೂ ದಾಳಿ ನಡೆಸಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.

ಗಂಗೊಳ್ಳಿ ಗ್ರಾಪಂನ ನೀರು ಸರಬರಾಜು ಮಾಡುವ ವಾಟರ್ ಟ್ಯಾಂಕ್ ಮೇಲೆ ಹೆಜ್ಜೇನು ಗೂಡಿದ್ದು, ಗಾಳಿಗೆ ಅಲುಗಾಡಿಯೋ ಅಥವಾ ಇನ್ನಾವುದೋ ಪಕ್ಷಿಗಳು ಹಾರುವಾಗ ಜೇನುಗೂಡು ಅಲುಗಾಡಿದ ಪರಿಣಾಮ ನೋಣಗಳು ಒಮ್ಮೆಲೇ ಗೂಡಿನಿಂದ ಹೊರಬಂದು ಸಿಕ್ಕಸಿಕ್ಕವರಿಗೆ ಕಚ್ಚಲು ಆರಂಭಿಸಿವೆ. ಕೂಡಲೇ ಎಚ್ಚೆತ್ತುಕೊಂಡ ಸ್ಥಳೀಯರು ಮುಂಜಾಗ್ರತಾ ಕ್ರಮ ಕೈಗೊಂಡು ಸಾರ್ವಜನಿಕರು ಆ ಮಾರ್ಗವಾಗಿ ಸಂಚರಿಸದಂತೆ ತಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net