

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಗುರುವಾರ ಗದ್ದೆಯಲ್ಲಿ ದನಗಳನ್ನು ಕಟ್ಟಲು ಹೋಗಿದ್ದ ರೈತ ರಮೇಶ್(48) ಎಂಬುವರ ಮೇಲೆ ಹೆಜ್ಜೇನು ದಾಳಿ ಮಾಡಿದೆ.
ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ರಮೇಶ್ ತಮ್ಮ ಮನೆಯ ಕೆಡಗೆ ಓಡಿ ಬಂದಿದ್ದಾರೆ. ಆದರೆ ಹೆಜ್ಜೇನು ದಾಳಿಯಿಂದ ಪ್ರಜ್ಞೆ ತಪ್ಪಿ ರಸ್ತೆ ಬದಿಯಲ್ಲಿ ಬಿದ್ದಿದ್ದರು. ಇವರ ಪತ್ನಿ ಕರೆ ಮಾಡಿದಾಗ ಸ್ವೀಕರಿಸಿದೆ ಇದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡು ಗದ್ದೆಯ ಬಳಿಗೆ ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಕೂಡಲೇ ಅಕ್ಕ, ಪಕ್ಕದ ಮನೆಯವರು ರಮೇಶ್ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.