ಹೆಜ್ಜೇನು ದಾಳಿಯಿಂದ ಹಲವರಿಗೆ ಗಾಯ

IMG-20240516-WA0277
ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಆಸ್ಪತ್ರೆಗೆ ಭೇಟಿ
Published on

ಶ್ರೀರಂಗಪಟ್ಟಣ: ಸಮೀಪದ ಪ್ರವಾಸಿ ಮಂದಿರ ಬಳಿ ವಿಹಾರಕ್ಕೆ ಆಗಮಿಸಿ ಕಾವೇರಿ ನದಿ ತೀರದಲ್ಲಿ ಕುಳಿತಿದ್ದವರ ಮೇಲೆ ಗುರುವಾರ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿ ಮಾಡಲಾಗಿದೆ. ವಿಷಯ ತಿಳಿದು ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಾರುತಿ ಸೇರಿದಂತೆ ಇತರ ವೈದ್ಯರೊಂದಿಗೆ ಚರ್ಚಿಸಿ ಗಾಯಾಳುಗಳಿಗೆ ಅವಶ್ಯ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net