ಆ. 24ರಂದು ಹೆಜ್ಜೆ ಗೆಜ್ಜೆ ನೂಪುರ ಝೇಂಕಾರ

hejje gejje noopura
Published on

ಉಡುಪಿ: ಹೆಜ್ಜೆ ಗೆಜ್ಜೆ ನೃತ್ಯಾಲಯದ ಆಶ್ರಯದಲ್ಲಿ ಐವೈಸಿ ಇನ್ಫೋಸಿಸ್​ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಆ. 24 ರಂದು ವಿದುಷಿ ದೀಕ್ಷಾ ರಾಮಕೃಷ್ಣ ಸಂಯೋಜಿಸಿದ ಸುಮಾರು 23 ಕಲಾವಿದರನ್ನೊಳಗೊಂಡ ನೂತನ ಭರತನಾಟ್ಯ ನೃತ್ಯಬಂಧಗಳ ನೂಪುರ ಝೇಂಕಾರ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೆಜ್ಜೆ ಹೆಜ್ಜೆ ನಿರ್ದೇಶಕಿ, ವಿದುಷಿ ಯಶಾ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಯಂಕಾಲ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕಿ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್​, ಹಿರಿಯ ನೃತ್ಯ ಗುರು ವಿದುಷಿ ಶ್ರೀಲತಾ ನಾಗರಾಜ್​, ಭರತನಾಟ್ಯ ಕಲಾವಿದ, ತಾಳತಜ್ಞ, ನಟುವನಾರ್​ ಮಂಜುನಾಥ ಎನ್​. ಪುತ್ತೂರು ಮತ್ತು ಸಮಾಜ ಸೇವಾ ಧುರೀಣ ಡಾ. ಶರಣಬಸವ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ವಿದುಷಿ ದೀಕ್ಷಾ ರಾಮಕೃಷ್ಣ ಮತ್ತು ವಿದುಷಿ ರಂಜನಿ ಸಾಮಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net