28ಕ್ಕೆ ‘ಹೆಜ್ಜೆ-ಗೆಜ್ಜೆ’ ಸಂಭ್ರಮ

Patriatic dance
Published on

ಮೈಸೂರು: ನಿಮಿಷಾಂಬಾ ಡ್ಯಾನ್ಸ್ ಪ್ರಮೋಟರ್‌ನ 26ನೇ ವಾರ್ಷಿಕೋತ್ಸವ ಅಂಗವಾಗಿ ಜ.28ರಂದು ‘ಹೆಜ್ಜೆ-ಗೆಜ್ಜೆ’ ಸಂಭ್ರಮ ಆಯೋಜಿಸಲಾಗಿದೆ.

ನಗರದ ಜೆ.ಕೆ.ಮೈದಾನದಲ್ಲಿರುವ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಮೃತ ಮಹೋತ್ಸವ ಭವನದಲ್ಲಿ ಅಂದು ಸಂಜೆ 5 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಲಿದ್ದಾರೆ.

ಬಳಿಕ ಸುಮಾರು 350 ಕಲಾವಿದರು ದೇವ-ದೇವಿ ವೈಭವ ನೃತ್ಯೋತ್ಸವವನ್ನು ಪ್ರದರ್ಶಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net