

ಮಡಿಕೇರಿ:
ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮಹೂರ್ತ ಹಬ್ಬದ ಒತ್ತರ್ಮೆ ಕೂಟ ಸಂಘದ ಅಧ್ಯಕ್ಷÀ ಚಳಿಯಂಡ ಯಶ್ವಥ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ಕುಶಾಲನಗರ ಕೇರಳ ಸಮಾಜ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಮುಂಬರುವ ವರ್ಷಗಳಲ್ಲಿ ಸಮಾಜಕ್ಕೆ ನಿವೇಶನ ಖರೀದಿಸಿ ಅ ನಿವೇಶನದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲು ಸಭೆಯಲ್ಲಿ ಸಲಹೆಗಳು ಕೇಳಿ ಬಂದವು.
ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜನಾಂಗದ ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಪ್ರದೇಶಿಕ ಸಾರಿಗೆ ಇಲಾಖೆ ಬ್ರೇಕ್ ಇನ್ಸ್ಪೆಕ್ಟರ್ ಪೊಕ್ಕಳಿಚಂಡ ಮೋಹನ್ ಕುಮಾರ್, ಕುಶಾಲನಗರ ಜೆ. ಸಿ. ಐ ಅಧ್ಯಕ್ಷೆ ತಂಬAಡ ತೇಜ ದಿನೇಶ್ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಚಂಗಚAಡ ಸುಬ್ರಮಣಿ, ಕಾರ್ಯದರ್ಶಿ ಪಂದಿಕAಡ ವಿಠ್ಠಲ, ಮಂಡೇಡ ದೀಪಕ್, ಖಚಾಂಚಿಗಳಾದ ಕೊಂಗೆಪ್ಪAಡ ನಂಜಪ್ಪ, ನಿರ್ದೆಶಕರುಗಳಾದ ಪುದಿಯತಂಡ ಬೆಳ್ಳಿಯಪ್ಪ, ಪುದಿಯತಂಡ ಗಾಂಧಿ, ಕಾಟಿಕುಟ್ಟೀರ ಮೊಣ್ಣಪ್ಪ, ಮೇಲತಂಡ ಮಂಜುಳ, ಪೊಕ್ಕಳಿಚಂಡ ಲಲಿತ, ಚಂಗಚAಡ ನಂಜಪ್ಪ, ಮಂಡೇಯAಡ ಪಳಂಗಪ್ಪ, ಪ್ರಮುಖರಾದ ಕೊಂಗೆಪ್ಪAಡ ಶಶಿ ಬೀಮಯ್ಯ, ಪಡಞರಂಡ ಪ್ರಭು ಕುಮಾರ್, ಕೊಪ್ಪಡ ಪಳಂಗಪ್ಪ, ಪಾನಿಕುಟ್ಟೀರ ಕುಟ್ಟಪ್ಪ, ಕೊಕ್ಕೇರ ಜನನಾಥ್, ತಂಬAಡ ಮಂಜುನಾಥ್, ಕೊಂಗೆಪ್ಪAಡ ರವಿ, ಚಳಿಯಂಡ ಕಮಲ, ಪಂದಿಕAಡ ಈಶ್ವರ್, ಚಳಿಯಂಡ ಅಚ್ಚಯ್ಯ ಮತ್ತಿತರರು ಇದ್ದರು.