ಲೈನ್​ಮನ್​ಗಳ ಕಾರ್ಯಕ್ಕೆ ಗ್ರಾಮಸ್ಥರ ಸಲಾಂ - ಹರಿಯುವ ಹಳ್ಳದಲ್ಲಿ ನಿಂತು ವಿದ್ಯುತ್ ಸಂಪರ್ಕ ನೀಡಿದ ಹೆಸ್ಕಾಂ ಸಿಬ್ಬಂದಿ

29 ylp 01 (line)
Published on

ಯಲ್ಲಾಪುರ: ಮಳೆ-ಗಾಳಿ ಎನ್ನದೇ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಹೆಸ್ಕಾಂ ಲೈನ್​ಮನ್​ಗಳು ಪಡುವ ಶ್ರಮ ಅಪಾರ. ಇದಕ್ಕೊಂದು ನಿದರ್ಶನವೆಂಬಂತೆ ತಾಲೂಕಿನ ನಾಗರಜಡ್ಡಿಯಲ್ಲಿ ಹರಿಯುವ ಹಳ್ಳದಲ್ಲೇ ನಿಂತು ವಿದ್ಯುತ್ ಲೈನ್ ಸರಿಪಡಿಸಿ ಲೈನ್​ವುನ್​ಗಳು ಗಮನ ಸೆಳೆದಿದ್ದಾರೆ.

ಕಂಪ್ಲಿ ಗ್ರಾ.ಪಂ. ವ್ಯಾಪ್ತಿಯ ನಾಗರಜಡ್ಡಿಯಲ್ಲಿ ವಿದ್ಯುತ್ ಲೈನ್ ತುಂಡಾಗಿ ಸಂಪರ್ಕ ಕಡಿತಗೊಂಡಿತ್ತು. ರಭಸದಿಂದ ಹರಿಯುವ ಹಳ್ಳದಲ್ಲಿ ಲೈನ್​ವುನ್​ಗಳು ನಿಂತು ಅಪಾಯ ಲೆಕ್ಕಿಸದೆ ಲೈನ್ ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

ಲೈನ್​ವುನ್​ಗಳಾದ ಬಸವರಾಜ, ಲಕ್ಷ್ಮಣ, ದಿನೇಶ ಹಾಗೂ ಕರಿಬಸು ಹರಿಯುವ ಹಳ್ಳದಲ್ಲೇ ನಿಂತು ಲೈನ್ ಸರಿಪಡಿಸಿದ್ದು, ನಾಲ್ಕಾರು ದಿನಗಳಿಂದ ಕತ್ತಲೆಯಲ್ಲಿದ್ದ ಸುತ್ತಮುತ್ತಲಿನ ಗ್ರಾಮಗಳಿಗೆ ಪುನಃ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಲೈನ್​ವುನ್​ಗಳ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net