

ವಿಜಯವಾಣಿ ಸುದ್ದಿಜಾಲ ಹೆಬ್ರಿ
ವಿಶ್ವಕರ್ಮ ಮೂಲ ಪರಂಪರೆ ಅರಿತು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಮಠ ದೇವಸ್ಥಾನಗಳು ಸಮಾಜಕ್ಕೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುತ್ತಿದ್ದು, ದೇಶದ ಸದೃಢತೆಗೆ ಇದೂ ಪ್ರಮುಖ ಕಾರಣ ಎಂದು ಹಾಸನ ಅರೇಮಾದನ ಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹೇಳಿದರು.
ಹೆಬ್ರಿಯ ವಿಶ್ವಕರ್ಮ ಯುವ ವೃಂದದ ವತಿಯಿಂದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ವಿಶ್ವಕರ್ಮ ಮಹಿಳಾ ಮಂಡಳಿ ಸಹಕಾರದಲ್ಲಿ ಇತ್ತೀಚೆಗೆ ನಡೆದ 20ನೇ ವಾರ್ಷಿಕ ಸಮಾವೇಶ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ಆಶೀರ್ವಚನ ನೀಡಿದರು.
ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಶುಭಹಾರೈಸಿದರು. ಹೆಬ್ರಿ ವಿಶ್ವಕರ್ಮ ಯುವ ವೃಂದದ ಅಧ್ಯಕ್ಷ ಸಂತೋಷ ಆಚಾರ್ಯ ಹೆಬ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ.ಎ ಆಚಾರ್ಯ, ರಾಮಕೃಷ್ಣ ಆಚಾರ್ಯ, ಸುಗುಣಾ ಶಿವರಾಮ ಆಚಾರ್ಯ, ಯುವ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಶಾಂತ ಆಚಾರ್ಯ ಸ್ವಾಗತಿಸಿದರು. ಪ್ರಸನ್ನ ಆಚಾರ್ಯ ವರದಿ ವಾಚಿಸಿದರು. ಸಂತೋಷ್ ಆಚಾರ್ಯ, ರಘುವೀರ್ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ಅರವಿಂದ ಆಚಾರ್ಯ ಬಹುಮಾನ ವಿತರಣೆ ಪಟ್ಟಿ ವಾಚಿಸಿದರು. ಸಂದೇಶ್ ಆಚಾರ್ಯ ವಿದ್ಯಾರ್ಥಿ ವೇತನ ವಿವರ ವಾಚಿಸಿದರು. ಭುವನೇಂದ್ರ ಆಚಾರ್ಯ ನಿರೂಪಿಸಿದರು.
ಶೈಕ್ಷಣಿಕ ಸಾಧಕಿ ಪ್ರೀಯಾ ಆಚಾರ್ಯ ತಣ್ಣೀರು, ಕಜ್ಕೆ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಮಿತಿ ಉಪಾಧ್ಯಕ್ಷ ರಾಜೇಶ ಆಚಾರ್ಯ ಮಠದಬೆಟ್ಟು ಅವರನ್ನು ಗೌರವಿಸಲಾಯಿತು.