ಹೆಬ್ರಿ ತಾಪಂ ಅಧ್ಯಕ್ಷರಾಗಿ ರಮೇಶ್ ಕುಮಾರ್

Hebri talluk panchayiti
Published on

ಹೆಬ್ರಿ: ನೂತನ ಹೆಬ್ರಿ ತಾಲೂಕು ಪಂಚಾಯಿತಿ ರಚನೆಗೊಂಡ ಬಳಿಕ ತಾಪಂ ಪ್ರಥಮ ಅಧ್ಯಕ್ಷರಾಗಿ ಕಾರ್ಕಳ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ಶಿವಪುರದ ರಮೇಶ್ ಕುಮಾರ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಡಾಮಕ್ಕಿ ಕ್ಷೇತ್ರದ ತಾ.ಪಂ.ಸದಸ್ಯ ಬೆಳ್ವೆ ಚಂದ್ರಶೇಖರ ಶೆಟ್ಟಿ ಆಯ್ಕೆಯಾದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿದಂತೆ ಅಮೃತ್ ಕುಮಾರ್ ಶೆಟ್ಟಿ ಚಾರ, ಚಂದ್ರಶೇಖರ್ ಆರ್.ಶೆಟ್ಟಿ ಹೆಬ್ರಿ, ಲಕ್ಷ್ಮೀ ದಯಾನಂದ ನಾಡ್ಪಾಲು, ಸುಲತಾ ನಾಯ್ಕ ವರಂಗ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net