ಹೆಬ್ರಿ ಮೆಸ್ಕಾಂ ಉಪವಿಭಾಗ ಜನಸಂಪರ್ಕ ಸಭೆ

mescom
ಮೆಸ್ಕಾಂ ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಹೆಬ್ರಿ ಮೆಸ್ಕಾಂ ಉಪ ವಿಭಾಗದ ವತಿಯಿಂದ ಜನಸಂಪರ್ಕ ಸಭೆ ಮಂಗಳವಾರ ನಡೆಯಿತು.
Published on

ಹೆಬ್ರಿ: ಹೆಬ್ರಿ ಮೆಸ್ಕಾಂ ಉಪ ವಿಭಾಗದ ವತಿಯಿಂದ ಮಂಗಳವಾರ ಜನಸಂಪರ್ಕ ಸಭೆ ನಡೆಯಿತು.

ಸಭೆಯಲ್ಲಿ ಶಿರ್ಲಾಲು ನಿಡ್ಡೆಪಾಡಿಯಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇರುವುದರಿಂದ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಶೀತಲ್ ಕುಮಾರ್ ಜೈನ್ ಆಗ್ರಹಿಸಿದರು.

ಕನ್ಯಾನ ವಿದ್ಯುತ್ ಪರಿವರ್ತಕದ ಹತ್ತಿರ ಎರಡು ಅಪಾಯಕಾರಿ ಮರ ಇರುವುದರಿಂದ ಮರ ಕಡಿಯಲು ವಿದ್ಯುತ್ ತಂತಿ ಬಿಡಿಸಿಕೊಡಲು ಹೆಬ್ರಿ ಗ್ರಾಪಂ ಸದಸ್ಯ ಸಂತೋಷ್ ನಾಯಕ್ ಕನ್ಯಾನ ಆಗ್ರಹಿಸಿದರು. ಬೀಚನಾಡಿಯಲ್ಲಿ ಮುದ್ರಾಡಿಗೆ ಸೇರಿರುವ ವಿದ್ಯುತ್ ಪರಿವರ್ತಕ ಇದೆ. ಹೊಳೆಯ ಆಚೆ ಇರುವ ಹೆಬ್ರಿಯ ಗ್ರಾಹಕರಿಗೂ ಇದು ಸಮೀಪವಿರುವುದರಿಂದ ಬಳಸಲು ಅವಕಾಶ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಸಭೆಗೆ ಹೆಚ್ಚಿನ ಪ್ರಚಾರ ನೀಡಿದರೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಹೀಗಾಗಿ ಮುಂದಿನ ಸಭೆಗೆ ಹೆಚ್ಚಿನ ಪ್ರಚಾರ ನೀಡಿ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಶೆಟ್ಟಿ ಆಗ್ರಹಿಸಿದರು.

ಮೆಸ್ಕಾಂ ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ, ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ, ಹೆಬ್ರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್, ಸಹಾಯಕ ಇಂಜಿನಿಯರ್ ರಾಧಿಕಾ, ಇಂಜಿನಿಯರ್‌ಗಳಾದ ಶಿವಕುಮಾರ್, ಲಕ್ಷ್ಮೀಶ ಮಂಜಪ್ಪ ನಾಯ್ಕ, ಸಂದೀಪ ನಾಯ್ಕ, ಸಾರ್ವಜನಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net