

ಹೆಬ್ರಿ: ಹೆಬ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರಾಗಿದ್ದಾರೆ.
ಕನ್ನಡ ಭಾಷಣದಲ್ಲಿ ಮೇಧಾ ಉಡುಪ, ಇಂಗ್ಲಿಷ್ ಭಾಷಣದಲ್ಲಿ ಲಕ್ಷ ಬಿಲ್ಲವ, ಅಶು ಭಾಷಣದಲ್ಲಿ ಅಭಿಷೇಕ್, ಸಂಸ್ಕೃತ ಪಠಣದಲ್ಲಿ ಪವನ್ ಕಲ್ಕೂರ್, ಕವನವಾಚನದಲ್ಲಿ ಅನುಷಾ ನಾಯಕ್, ಚರ್ಚಾ ಸ್ಪರ್ಧೆಯಲ್ಲಿ ಅನ್ನಪೂರ್ಣ, ರಂಗೋಲಿಯಲ್ಲಿ ಸಮೀಕ್ಷಾ ಆರ್, ರಸಪ್ರಶ್ನೆಯಲ್ಲಿ ಪದ್ಮಶ್ರೀ ಮತ್ತು ಕಾರ್ತಿಕ್, ಸಂಸ್ಕೃತ ಭಾಷಣದಲ್ಲಿ ಪ್ರಣಮ್ಯಾ, ಭಾವಗೀತೆಯಲ್ಲಿ ಪೂರ್ವಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಜಾನಪದ ನೃತ್ಯದಲ್ಲಿ ಪ್ರಾಪ್ತಿ ಶೆಟ್ಟಿ ಮತ್ತು ತಂಡ, ಜಾನಪದ ಗೀತೆಯಲ್ಲಿ ಭೂಮಿಕಾ, ಚಿತ್ರಕಲೆಯಲ್ಲಿ ನಿಖಿಲ್ ಕುಲಾಲ್, ಪ್ರಬಂಧದಲ್ಲಿ ಸುಕನ್ಯಶ್ರೀ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಿಂದಿ ಭಾಷಣದಲ್ಲಿ ಸಿಂಚನ ದೇವಾಡಿಗ, ಭರತನಾಟ್ಯದಲ್ಲಿ ಸೌಂದರ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಸುಹಾಸ್ ಶೆಟ್ಟಿ, ವಿನೇಶ್ ಅಮೀನ್, ದತ್ತಾನಂದ್, ಹರಿಶ್ಚಂದ್ರ, ದಿವ್ಯ, ಪಾವನ ಶೆಟ್ಟಿ ಇದ್ದರು. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಟ್ರಸ್ಟಿಗಳು, ಪ್ರಾಂಶುಪಾಲ, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.