ಮುರಳೀಧರನ್ ಉದ್ಯಮಕ್ಕೆ ಹೆಬ್ಳೀಕರ್ ಆಕ್ಷೇಪ

Photograph_of_Muttiah_Muralitharan
Published on

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಬಳಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ಸ್ಥಾಪಿಸಲು ಉದ್ದೇಶಿಸಿರುವ ತಂಪು ಪಾನೀಯ ತಯಾರಿಕಾ ಘಟಕಕ್ಕೆ ಪರಿಸರವಾದಿ ಸುರೇಶ ಹೆಬ್ಳೀಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ ನೀರಿನ ಅಭಾವ ಇದ್ದು, ಮುರಳೀಧರನ್ ಉದ್ದೇಶಿತ ಘಟಕಕ್ಕೆ ನಿತ್ಯ ೨೦ ಲಕ್ಷ ಲೀಟರ್ ಬೇಕು ಎಂಬುದು ಹೆಬ್ಳೀಕರ್ ಆಕ್ಷೇಪಕ್ಕೆ ಕಾರಣ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಳೀಕರ್, ಉದ್ಯಮ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಹುಬ್ಬಳ್ಳಿ- ಧಾರವಾಡದ ಬಹುತೇಕ ಕಡೆಗಳಲ್ಲಿ ೫ ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ದಿನಕ್ಕೆ ೨೦ ಲಕ್ಷ ಲೀಟರ್ ನೀರು ಅಗತ್ಯವಿರುವ ಉದ್ಯಮ ಬೇಕೇ? ಹಾಗಾಗಿ ಮುತ್ತಯ್ಯ ಅವರು ಬೇರೆ ಜಿಲ್ಲೆಯಲ್ಲಿ ಉದ್ಯಮ ಸ್ಥಾಪಿಸಲಿ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಹೆಬ್ಳೀಕರ್ ಆಗ್ರಹಿಸಿದ್ದಾರೆ.
ಮುತ್ತಯ್ಯ ಮುರಳೀಧರನ್ ಅವರು ೨೫೬ ಕೋಟಿ ರೂ. ವೆಚ್ಚದಲ್ಲಿ ಘಟಕ ಆರಂಭಿಸಲು ಉದ್ದೇಶಿಸಿದ್ದಾರೆ. ಅವರ ಉದ್ಯಮಕ್ಕೆ ಸರ್ಕಾರ ೧೩.೫ ಎಕರೆ ಜಾಗ ಒದಗಿಸಲಿದೆ. ಕೆಲ ದಿನಗಳ ಹಿಂದೆ ಮುತ್ತಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net