

ರಾಯಚೂರು ಜಿಲ್ಲೆಯ ಪತ್ರಕರ್ತ ಭೀಮರಾವ್ ನಿರ್ದೇಶನದಲ್ಲಿ ರೂಪಿಸಲಾಗಿರುವ ಹೆಬ್ಬುಲಿ ಕಟ್ ಚಲನಚಿತ್ರ ಜು.4 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಸಾರ್ವಜನಿಕರು ಚಿತ್ರ ವೀಕ್ಷಿಸುವ ಮೂಲಕ ಬೆಂಬಲಿಸುವಂತೆ ವಕೀಲ ಶಿವುಕುಮಾರ ಮ್ಯಾಗಳಮನಿ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಲಾವಿದರು ನಟಿಸಿರುವ ಚಲನಚಿತ್ರ ಹೆಬ್ಬುಲಿ ಕಟ್ ಜಾತಿ ತಾರತಮ್ಯ, ಅಸಮಾನತೆ, ಕೋಮುವಾದ, ಪ್ರೇಮ, ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡಿದೆ. ಜಿಲ್ಲೆಯ ಅನೇಕ ನಟರು ಅಭಿನಯಿಸಿರುವ ಚಿತ್ರದ ಟ್ರೈಲರ್ ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
ಚಲನಚಿತ್ರ ಮಂದಿರದಲ್ಲಿಯೂ ಬಿಡುಗಡೆಗೆ ಸಿದ್ದವಾಗಿದ್ದು ರಾಯಚೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜನರು ಸ್ಥಳೀಯ ಕಲಾವಿದರು, ತಂತ್ರಜ್ಞರು, ನಿರ್ದೇಶಕರನ್ನು ಬೆಂಬಲಿಸಲು ಚಿತ್ರಮಂದಿರದಲ್ಲಿ ವೀಕ್ಷಿಸುವ ಮೂಲಕ ಬೆಂಬಲಿಸಬೇಕೆಂದರು.
ಈ ಸಂದರ್ಭದಲ್ಲಿ ಈರಣ್ಣ ಬೆಂಗಾಲಿ ಪ್ರವೀಣಕುಮಾರ, ದೀಪಕ್ ಭಂಡಾರಿ ಇದ್ದರು.