

ಕಾರವಾರ: ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಇಬ್ಬರು ಅಭ್ಯರ್ಥಿಗಳು ಮಿತಿಗಿಂತ ಹೆಚ್ಚು ಖರ್ಚು ಮಾಡಿರುವ ಬಗ್ಗೆ ವೆಚ್ಚ ವೀಕ್ಷಕರು ಆಕ್ಷೇಪಣೆ ಸಲ್ಲಿಸಿದ್ದು, ಈ ಬಗ್ಗೆ ಜಿಲ್ಲಾಡಳಿತವು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಹಾಗೂ ಭಟ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಸುನೀಲ ನಾಯ್ಕ ಮಿತಿಗಿಂತ ಹೆಚ್ಚು ಹಣ ಖರ್ಚು ಮಾಡಿದ ಬಗ್ಗೆ ಜಿಲ್ಲಾಡಳಿತ ಆಯೋಗಕ್ಕೆ ವರದಿ ನೀಡಿರುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಗರಿಷ್ಠ 40 ಲಕ್ಷ ರೂ. ವೆಚ್ಚ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಪ್ರತಿ ಅಭ್ಯರ್ಥಿ ಚುನಾವಣೆಗೆ ನಾಮಪತ್ರ ಸಲ್ಲಿಸಿದಾಗಿನಿಂದ ಹಿಡಿದು ಮತದಾನದ ದಿನದವರೆಗೆ ಮಾಡಿದ ಒಟ್ಟು ಖರ್ಚುಗಳ ಮಾಹಿತಿ ಇಡಬೇಕು. ಮತ್ತು ಆಯೋಗಕ್ಕೆ ನಾಲ್ಕು ಹಂತದಲ್ಲಿ ಅಫಿಡವಿಟ್ ಸಲ್ಲಿಸಬೇಕು.
ಅಲ್ಲದೆ, ಆಯೋಗವೂ ಸೆಕ್ಟರ್ ಆಫೀಸರ್‌ಗಳನ್ನು ನೇಮಿಸಿ ಅಭ್ಯರ್ಥಿಯ ಖರ್ಚುಗಳ ಬಗ್ಗೆ ಲೆಕ್ಕಾಚಾರ ಇಡುತ್ತದೆ. ಎಲ್ಲ ಅಭ್ಯರ್ಥಿಗಳ ಚುನಾವಣಾ ಖರ್ಚು ನೋಡಲೆಂದೇ ಆಯೋಗದಿಂದ ಮೂವರು ಲೆಕ್ಕ ವೀಕ್ಷಕರು ನೇಮಕವಾಗಿದ್ದರು.
ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಜಿಲ್ಲೆಯ ಎಲ್ಲ 57 ಅಭ್ಯರ್ಥಿಯ ಖರ್ಚು ವೆಚ್ಚಗಳ ಲೆಕ್ಕಾಚಾರ ನಡೆಸಲಾಗಿದೆ. ಎಲ್ಲ ಅಭ್ಯರ್ಥಿಗಳು ಅಫಿಡವಿಟ್ ಸಲ್ಲಿಸಿ, ತಾವು 40 ಲಕ್ಷದ ಒಳಗೇ ಖರ್ಚು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ, ಇಬ್ಬರು ಅಭ್ಯರ್ಥಿಗಳ ಅಫಿಡವಿಟ್‌ಗೂ ಜಿಲ್ಲಾಡಳಿತದ ಲೆಕ್ಕಾಚಾರಕ್ಕೂ ವ್ಯತ್ಯಾಸವಾಗಿದೆ. ಈ ಬಗ್ಗೆ ನೇಮಕವಾಗಿದ್ದ ಮೂವರಲ್ಲಿ ಒಬ್ಬ ಲೆಕ್ಕ ವೀಕ್ಷಕರು ಆಕ್ಷೇಪಣೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಶಿವರಾಮ ಹೆಬ್ಬಾರ ಮಿತಿಗಿಂತ 1.5 ಲಕ್ಷ ರೂ. ಹಾಗೂ ಸುನೀಲ ನಾಯ್ಕ 5 ಲಕ್ಷ ರೂ. ಹೆಚ್ಚುವರಿ ಖರ್ಚು ಮಾಡಿದ್ದಾರೆ ಎಂದು ಅವರು ಆಕ್ಷೇಪಿಸಿದ್ದು, ನಾವು ಅದನ್ನು ಆಯೋಗಕ್ಕೆ ತಿಳಿಸಿದ್ದೇವೆ.
ಆಯೋಗದಿಂದ ಸೂಚನೆ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ.
ಹಳಿಯಾಳದ ಕಾಂಗ್ರೆಸ್ ಶಾಸಕ ಆರ್ ವಿ.ದೇಶಪಾಂಡೆ-31.96 ಲಕ್ಷ ರೂ, ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ -38.37 ಲಕ್ಷ ರೂ., ಜೆಡಿಎಸ್‌ನ ಎಸ್.ಎಲ್.ಘೋಟ್ನೇಕರ್-20.52 ಲಕ್ಷ ರೂ., ಕಾರವಾರ ಶಾಸಕ ಸತೀಶ ಸೈಲ್-13.68 ಲಕ್ಷ ರೂ., ಬಿಜೆಪಿಯ ರೂಪಾಲಿ ನಾಯ್ಕ -32.02 ಲಕ್ಷ ರೂ., ಜೆಡಿಎಸ್‌ನ ಚೈತ್ರಾ ಕೊಠಾರಕರ್-6.89 ಲಕ್ಷ ರೂ., ಕುಮಟಾ ಶಾಸಕ ದಿನಕರ ಶೆಟ್ಟಿ-37.02 ಲಕ್ಷ ರೂ., ಕಾಂಗ್ರೆಸ್‌ನ ನಿವೇದಿತ ಆಳ್ವಾ-32.37 ಲಕ್ಷ ರೂ, ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ-14.90 ಲಕ್ಷ ರೂ., ಭಟ್ಕಳ ಶಾಸಕ ಮಂಕಾಳ ವೈದ್ಯ -17.82 ಲಕ್ಷ ರೂ.,ಸುನೀಲ ನಾಯ್ಕ, 30.48 ಲಕ್ಷ ರೂ., ಜೆಡಿಎಸ್‌ನ ನಾಗೇಂದ್ರ ನಾಯ್ಕ-3.67 ಲಕ್ಷ, ಶಿರಸಿ ಶಾಸಕ ಭೀಮಣ್ಣ ನಾಯ್ಕ-29.18 ಲಕ್ಷ, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ-15.58 ಲಕ್ಷ, ಜೆಡಿಎಸ್‌ನ ಉಪೇಂದ್ರ ಪೈ-5.09 ಲಕ್ಷ, ಯಲ್ಲಾಪುರದ ಶಿವರಾಮ ಹೆಬ್ಬಾರ-38.16 ಲಕ್ಷ, ಕಾಂಗ್ರೆಸ್‌ನ ವಿ.ಎಸ್.ಪಾಟೀಲ-18.61 ಲಕ್ಷ ರೂ, ಜೆಡಿಎಸ್‌ನ ನಾಗೇಶ ನಾಯ್ಕ -8.95 ಲಕ್ಷ ರೂ. ಖರ್ಚು ಮಾಡಿದ್ದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ. ಇದರಲ್ಲಿ ಹೆಬ್ಬಾರ ಹಾಗೂ ಸುನೀಲ ನಾಯ್ಕ ಬಿಟ್ಟು ಉಳಿದ ಅಭ್ಯರ್ಥಿಗಳ ಲೆಕ್ಕದ ಬಗ್ಗೆ ಆಕ್ಷೇಪಣೆಯಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆ ವೇಳೆ ಪ್ರಚಾರಕ್ಕೆ ಅಂಕೋಲಾಕ್ಕೆ ಬಂದಿದ್ದರು. ಅದಕ್ಕೆ 496 ಬಸ್‌ಗಳಲ್ಲಿ ಕಾರ್ಯಕರ್ತರು ಬಂದಿದ್ದರು. ಒಟ್ಟಾರೆ 2.47 ಕೋಟಿ ರೂ. ಖರ್ಚಾಗಿದೆ ಎಂದು ಆಯೋಗ ಲೆಕ್ಕ ಹಾಕಿತ್ತು. ಆ ಮೊತ್ತವನ್ನು ಎಲ್ಲ 6 ಅಭ್ಯರ್ಥಿಗಳಿಗೆ ಸಮನಾಗಿ ಹಂಚಲು ಯೋಜಿಸಿತ್ತು. ಆದರೆ, ಮೋದಿ ಕಾರ್ಯಕ್ರಮಕ್ಕೆ ಬಂದ ಬಸ್‌ಗಳ ಲೆಕ್ಕ ನಮಗೆ ಸಂಬAಧವೇ ಇಲ್ಲ ಎಂದು ಅಭ್ಯರ್ಥಿಗಳು ಅಫಿಡವಿಟ್ ಸಲ್ಲಿಸಿದ್ದಾರೆ. ಇದರಿಂದ ಕಾರ್ಯಕ್ರಮಕ್ಕೆ ಬಸ್ ಬುಕ್ ಮಾಡಿದ 180 ಕ್ಕೂ ಅಽಕ ಬಿಜೆಪಿ ಕಾರ್ಯಕರ್ತರ ಮೇಲೆ ಆಯಾ ಚುನಾವಣಾಽಕಾರಿಗಳು ಸಂಬAಧಪಟ್ಟ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆಯೇ ಪ್ರಕರಣ ದಾಖಲಿಸಿದ್ದಾರೆ.
ಏನಾಗಬಹುದು..?