ಮಹಿಳೆಯರ ಅಗೌರವಕ್ಕೆ ಹೆಬ್ಬಾರ್ ಖಂಡನೆ

20mnd1- Hebbar
Published on

ಮುಂಡಗೋಡ: ಯಾವುದೇ ರಾಜಕಾರಣಿಯಾಗಲಿ ಮಹಿಳೆಯರ ಬಗ್ಗೆ ಅಗೌರವವಾಗಿ ನಡೆದುಕೊಳ್ಳುವುದನ್ನು ನಾನು ಖಂಡಿಸುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಪ್ರವಾಸ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರು ಅವಾಚ್ಯವಾಗಿ ಹೇಳಿದ್ದು ನಿಜವಿದ್ರೆ ಅದು ಅಕ್ಷಮ್ಯ ಅಪರಾಧ. ಅವರು ಶಾಸಕರಾಗಿ ಮಂತ್ರಿಗಳಾಗಿದ್ದವರು. ಸದನದಲ್ಲಿ ಏನೇಲ್ಲಾ ಶಬ್ದ ಉಪಯೋಗಿಸುತ್ತಿರುವುದು ಸಮಾಜಕ್ಕೆ ಶೋಭೆ ತರುವುದಿಲ್ಲ. ಉನ್ನತ ಸ್ಥಾನದಲ್ಲಿರುವವರ ಬಾಯಲ್ಲಿ ಅಂತಹ ಶಬ್ದ ಬರಬಾರದು. ಯಾವುದೇ ರಾಜಕೀಯ ಪಕ್ಷವಾಗಿರಬಹುದು, ಸಮಾಜದಲ್ಲಿ ಸ್ತ್ರೀಯರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಈ ರೀತಿಯ ಹೇಳಿಕೆ ಅಕ್ಷಮ್ಯ ಅಪರಾಧವಾಗಿದ್ದು, ಅದನ್ನು ಖಂಡಿಸುತ್ತೇನೆ. ಸಂಬಂಧಪಟ್ಟವರು ದೂರು ಸಲ್ಲಿಸಿದಾಗ ಕಾನೂನು ತನ್ನ ಕೆಲಸ ಮಾಡೇ ಮಾಡುತ್ತದೆ ಎಂದರು.  ಮಾಜಿ ಶಾಸಕ ವಿ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹೀರಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net