

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಿಯ 32ನೇ ಜಾತ್ರಾ ಮಹೋತ್ಸವದ ಅಂಗವಾಗಿ ಜ. 13 ಮತ್ತು 14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 13ರಂದು ಸಂಜೆ 4ಕ್ಕೆ ಬನಶಂಕರಿ ದೇವಿಯ ಬೆಳ್ಳಿ ಮೂರ್ತಿಯೊಂದಿಗೆ ರಥೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಜರುಗಲಿದೆ. 14ರಂದು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ವಿವಿಧ ಕಲಾ ತಂಡಗಳಿ0ದ ಕೋಲಾಟ ಮೇಳ, ಜಾಂಜ್ ಮೇಳ, ಜಗ್ಗಲಗಿ ಮೇಳ, ಡೊಳ್ಳು ಕುಣಿತ, ಕರಡಿ ಮಜಲು ಮತ್ತು ಗೊಂಬೆ ಕುಣಿತ ನಡೆಯಲಿದೆ. 13 ಮತ್ತು 14ರಂದು ಗ್ರಾಮದ ಉಪ್ಪಿನಮಳೆ ಮೈದಾನದಲ್ಲಿ ಕೃಷಿ ಯಂತ್ರೋಪಕರಣ ಪ್ರದರ್ಶನ ಹಾಗೂ ಜಾನುವಾರುಗಳ ಜಾತ್ರೆ ಇರುತ್ತದೆ. ರೈತರು ಜಾನುವಾರಗಳನ್ನು ಪ್ರದರ್ಶಿಸಬಹುದು.