ಬೆಂ.ನಗರ ವ್ಯಾಪ್ತಿಗೆ ಹೆಬ್ಬಗೋಡಿ ಠಾಣೆ

20 06 2025_BNG_RURAL_PAGE_2
ಹೆಬ್ಬಗೋಡಿ ಠಾಣೆ ಬೆಂಗಳೂರು ನಗರ ಪೊಲೀಸ್​ ವ್ಯಾಪ್ತಿ ಸರಹದ್ದಿಗೆ ಸೇರಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂದ ಅಧ್ಯಕ್ಷ ಎ.ಪ್ರಸಾದ್​ ಮಾತನಾಡಿದರು. ಎಲೆಕ್ಟಾನಿಕ್​ ಸಿಟಿಯ ಟ್ರಾಪಿಕ್​ ಠಾಣೆಯ ಪೊಲೀಸ್​ ಇನ್​ಸ್ಪೆಕ್ಟರ್​ ಶ್ಯಾಮ್​, ಸಂಜೀವ್​ ಸಾವಂತ್​, ಶಿವಕುಮಾರ್​, ನರೇಂದ್ರ ಕುಮಾರ್​ ಇದ್ದರು.
Published on

ಆನೇಕಲ್ : ಹೆಬ್ಬಗೋಡಿ ಠಾಣೆಯು ಬೆಂಗಳೂರು ನಗರ ಪೊಲೀಸ್​ ವ್ಯಾಪ್ತಿಗೆ ಸೇರಿದ ಹಿನ್ನೆಲೆಯಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂದಿಂದ ಬುಧವಾರ ಪೊಲೀಸರು ಮತ್ತು ಸಂಚಾರ ಪೊಲೀಸರಿಗೆ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮವನ್ನು ಬೊಮ್ಮಸಂದ್ರ ಕೈಗಾರಿಕಾ ಸಂದ ಅಧ್ಯಕ್ಷ ಎ.ಪ್ರಸಾದ್​ ಉದ್ಘಾಟಿಸಿದರು.

ತಾಲೂಕಿನಲ್ಲಿ ಹೆಚ್ಚು ಕೈಗಾರಿಕೆಗಳಿವೆ. ಜನಸಂದಣಿ ಹೆಚ್ಚಾಗಿದ್ದರಿಂದ ಗೃಹ ಇಲಾಖೆ ಹೆಬ್ಬಗೋಡಿ ಪೊಲೀಸ್​ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್​ ಸೇರಿಸಿದೆ. ಆನೇಕಲ್​ ತಾಲೂಕು ಬೆಂಗಳೂರು ನಗರ ಜಿಲ್ಲೆಯಲ್ಲಿದ್ದರೂ, ಪೊಲೀಸ್​ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿದೆ. ಹೆಬ್ಬಗೋಡಿಯನ್ನು ನಗರ ವ್ಯಾಪ್ತಿಗೆ ಸೇರಿಸಿದ್ದರಿಂದ ಕೈಗಾರಿಕೆಗಳಿಗೆ ಕಾರ್ಮಿಕರಿಗೆ ಉಪಯುಕ್ತವಾಗಲಿದೆ ಎಂದು ಎ.ಪ್ರಸಾದ್​ ಹೇಳಿದರು.

ಹೊಸದಾಗಿ ಟ್ರಾಫಿಕ್​ ಪೊಲೀಸರು ನಮ್ಮ ವ್ಯಾಪ್ತಿಗೆ ಸೇರ್ಪಡೆ ಆಗುತ್ತಿದ್ದು, ಬೊಮ್ಮಸಂದ್ರ ಕೈಗಾರಿಕಾ ಸಂ ಹಾಗೂ ಕೈಗಾರಿಕೆಗಳು ಸಂಪೂರ್ಣ ಸಹಕಾರ ನೀಡಲಿದೆ. ಪೊಲೀಸರು ಸಾಮಾಜಿಕ ಕಳಕಳಿ ಜತೆಗೆ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಎಲೆಕ್ಟ್ರಾನಿಕ್​ ಸಿಟಿಯ ಟ್ರಾಫಿಕ್​ ಠಾಣೆಯ ವ್ಯಾಪ್ತಿಗೂ ಹೆಬ್ಬಗೋಡಿ ಠಾಣೆಯ ಸರಹದ್ದು ಸೇರ್ಪಡೆಯಾಗಿದ್ದು, ಇನ್ನುಂದೆ ಬೊಮ್ಮಸಂದ್ರ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಾಗುವ ಟ್ರಾಫಿಕ್​ ಸಮಸ್ಯೆಯನ್ನು ಎಲೆಕ್ಟ್ರಾನಿಕ್​ ಸಿಟಿಯ ಟ್ರಾಫಿಕ್​ ಪೊಲೀಸರೇ ಬಗೆಹರಿಸುತ್ತಾರೆ ಎಂದರು.

ಮ್ಮಸಂದ್ರ ಕೈಗಾರಿಕಾ ಸಂದ ಸಂಜೀವ್​ ಸಾವಂತ್​, ಶಿವಕುಮಾರ್​, ನರೇಂದ್ರ ಕುಮಾರ್​, ನಾಗರಾಜಶೆಟ್ಟಿ, ಅಶ್ವತ್ಥ, ಮಧುಸೂದನ್​, ನೀಲಕಂಠಯ್ಯ, ಲೀವೋ ಸೆಕ್ಯೂರಿಯಾ, ಮಲ್ಲಿಕಾರ್ಜುನಪ್ಪ, ಸತೀಶ್​ ಕುಮಾರ್​, ಲಾರಿ ಮಾಲೀಕರ ಸಂದ ಕೃಷ್ಣಾರೆಡ್ಡಿ, ಕನ್ನಡ ಪರ ಹೋರಾಟಗಾರ ಕಿರಣ್​ ಪ್ರಭಾಕರ್​ ರೆಡ್ಡಿ, ಶಿವಪ್ಪರೆಡ್ಡಿ ಇದ್ದರು.

ಹೆಚ್ಚಿನ ಸಿಬ್ಬಂದಿ ನೇಮಕ : ಬೊಮ್ಮಸಂದ್ರ ಭಾಗದಲ್ಲಿ ಆಗುತ್ತಿರುವ ಟ್ರಾಫಿಕ್​ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಎಸಿಪಿ ಶ್ರೀನಿವಾಸ್​, ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಟ್ರಾಫಿಕ್​ ಪೊಲೀಸ್​ ಸಿಬ್ಬಂದಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೇಮಿಸಲಾಗುವುದು ಎಂದರು. ಸಾರ್ವಜನಿಕರಿಂದ ರಸ್ತೆ ದಟ್ಟಣೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬೊಮ್ಮಸಂದ್ರ ಕೈಗಾರಿಕಾ ಜನರ ಮನವಿಯ ಮೇರೆಗೆ ಸಂಚಾರ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net