ಗಾಳಿಗೆ ಬಿದ್ದ ತಗಡು ಶೀಟ್‌; ಪಾರ್ಕಿಂಗ್‌ ಮಾಡಿದ್ದ ಆರು ಕಾರುಗಳಿಗೆ ಹಾನಿ

Damage 1
Published on

ಮಂಗಳೂರು: ಗುರುವಾರ ಮಧ್ಯಾಹ್ನ ಮಂಗಳೂರು ನಗರದಲ್ಲಿ ಸುರಿದ ಗಾಳಿ ಮಳೆಗೆ ಕೆಎಸ್‌ ರಾವ್‌ ರಸ್ತೆ ಹೋಟೆಲ್‌ ಗಣೇಶ್‌ ಮಹಲ್‌ ಎದುರಿನ ತಗಡು ಶೀಟ್‌ಗಳು ಬಿದ್ದು ಅಪಾರ ಹಾನಿ ಸಂಭವಿಸಿದೆ. ಶೀಟ್‌ನ ಕೆಳಭಾಗದಲ್ಲಿ ನಿಲ್ಲಿಸಲಾಗಿದ್ದ 6 ಕಾರುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ನಗರದಲ್ಲಿ ಬೆಳಗ್ಗಿನಿಂದಲೇ ಬಿಟ್ಟು ಬಿಟ್ಟು ಗಾಳಿ ಮಳೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net