ಕೋಳಿವಾಡದಲ್ಲಿ ಬಿರುಗಾಳಿಗೆ ಸೀಟು ಹಾರಿ ಹೋಗಿ ಅಪಾರ ಹಾನಿ

IMG-20250419-WA0008.jpg
Published on

ಹುಬ್ಬಳ್ಳಿ: ತಾಲೂಕಿನ ಕೋಳಿವಾಡದಲ್ಲಿ ಶುಕ್ರವಾರ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಮನೆಯ ಸೀಟ್ ಗಳು ಹಾರಿ ಹೋಗಿ ಅಪಾರ ಹಾನಿಯುಂಟಾಗಿದೆ.
ಈಶ್ವರಪ್ಪ, ರುದ್ರಪ್ಪ ಹಾಗೂ ಶೇಖರಪ್ಪ ಕರಿಲಿಂಗನವರ ಎಂಬುವವರಿಗೆ ಸೇರಿದ ಮನೆಯ ಸಂಪೂರ್ಣ ಸೀಟುಗಳು ಹಾರಿ ಹೋಗಿವೆ.

ಏಪ್ರಿಲ್ ೨೧ ರಂದು ಮನೆಯಲ್ಲಿ
ಮದುವೆ ನಿಶ್ಚಯವಾಗಿದ್ದರಿಂದ ಬಂಧು ಬಾಂಧವರು ಸೇರಿ ೩೦ಕ್ಕೂ ಹೆಚ್ಚು ಜನ ಮನೆಯಲ್ಲಿ ಇದ್ದರು.

ಘಟನೆಯಲ್ಲಿ ಸೀಟು ಹಾಗೂ ಇಟ್ಟಿಗೆಗಳು ಬಡಿದು ಮಕ್ಕಳು ಸೇರಿ ನಾಲ್ವರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಸ್ಥಳಕ್ಕೆ ಗ್ರಾಮ ಲೆಕ್ಕಧಿಕಾರಿ ಭೇಟಿ ನೀಡಿದ್ದಾರೆ.
ಮದುವೆ ಸಮಾರಂಭಕ್ಕಾಗಿ ಜವಳಿ ಹಾಗೂ ಇತರ ಸರಕುಗಳನ್ನು ತಂದು ಇಡಲಾಗಿತ್ತು. ಸುಮಾರು ೨.೫ ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net