

ಗಂಗೊಳ್ಳಿ: ಈ ಬಾರಿ ನಿಗದಿತ ಸಮಯಕ್ಕೆ ಮುಂಗಾರು ಆರಂಭವಾಗುವ ನಿರೀಕ್ಷೆಯಿದ್ದು, ವಾತ್ರವಲ್ಲದೆ ಉತ್ತಮ ಮುಂಗಾರು ಆಗುವ ಲಕ್ಷಣಗಳು ಗೋಚರಿಸಿವೆ. ಮುಂಗಾರು ಮಳೆಯನ್ನೇ ನಂಬಿ ಭತ್ತದ ಬೆಳೆ ವಾಡುವ ರೈತರ ಮೊಗದಲ್ಲಿ ತುಸು ಮಂದಹಾಸ ಮೂಡಿಸಿದೆ.
ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಒಂದಷ್ಟು ಮಳೆ ಸುರಿದಿದ್ದು, ಕೆಲವೆಡೆ ರೈತರು ಗದ್ದೆಗೆ ಗೊಬ್ಬರ, ಸುಡು ಮಣ್ಣು, ಗದ್ದೆ ಹದ ವಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇನ್ನಷ್ಟು ಮಳೆ ಬಂದರೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಮತ್ತಷ್ಟು ಬಿರುಸುಗೊಳ್ಳಲಿದೆ.
13,200 ಹೆಕ್ಟೇರ್ ಗುರಿ: ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 13,200 ಹೆಕ್ಟೇರ್ ಭತ್ತ ಬೆಳೆ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಕುಂದಾಪುರ ಹೋಬಳಿಯಲ್ಲಿ 4,350 ಹೆಕ್ಟೇರ್, ಬೈಂದೂರು ಹೋಬಳಿಯಲ್ಲಿ 4,600 ಹೆಕ್ಟೇರ್ ಹಾಗೂ ವಂಡ್ಸೆ ಹೋಬಳಿಯಲ್ಲಿ 4,250 ಹೆಕ್ಟೇರ್ ಗುರಿಯಿದ್ದು, ನಿರೀಕ್ಷಿತ ಪ್ರವಾಣದಲ್ಲಿ ಮಳೆ ಬಂದರೆ ಇದು ಸಾಕಾರಗೊಳ್ಳಲಿದೆ.
ಬಿತ್ತನೆ ಬೀಜ ಲಭ್ಯ: ಹೋಬಳಿ ವ್ಯಾಪ್ತಿಗಳಲ್ಲಿರುವ ರೈತ ಸೇವಾ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜ ಲಭ್ಯವಿದೆ. ಎಂ4 260 ಕ್ವಿಂಟಾಲ್ ತರಿಸಲಾಗಿದ್ದು, ಬಹುತೇಕ ಖಾಲಿಯಾಗಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಬ್ರಹ್ಮ, ಜ್ಯೋತಿ, ಸಹ್ಯಾದ್ರಿ ಕೆಂಪು ಚಂದ್ರಮುಖ್ತಿ ಬೀಜಗಳನ್ನು ವಿತರಿಸಲಾಗುತ್ತಿದ್ದು, ಉವಾ ತಳಿಯ ಬೀಜ ದಾಸ್ತಾನಿದೆ.
ಕುಂದಾಪುರ ಹಾಗೂ ವಂಡ್ಸೆ ಹೋಬಳಿಯನ್ನೊಳಗೊಂಡ ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದು, ಮುಂಗಾರು ಮಳೆಯನ್ನೇ ನಂಬಿಕೊಂಡು ಭತ್ತದ ಬೆಳೆ ವಾಡುವ ರೈತರ ಮೊಗದಲ್ಲಿ ತುಸು ಮಂದಹಾಸ ತರಿಸಿದೆ. ಉತ್ತಮ ಮುಂಗಾರು ಮಳೆಯಾಗಿ ಸಮೃದ್ಧ ಬೆಳೆ ಸಿಗುವಂತಾಗಲಿ ಎಂದು ರೈತಾಪಿ ವರ್ಗ ದೇವರಲ್ಲಿ ಮೊರೆ ಇಟ್ಟಿದ್ದಾರೆ.
ಈ ಬಾರಿ ಉತ್ತಮ ಮುಂಗಾರು ಆಗಬಹುದು ಅನ್ನುವ ನಿರೀಕ್ಷೆಯಿದೆ. ಬಿತ್ತನೆ ಬೀಜ ವಿತರಣೆ ಶುರುವಾಗಿದೆ. ಎಂ4 ಗೆ ಪರ್ಯಾಯವಾಗಿ ಸಹ್ಯಾದ್ರಿ ಕೆಂಪು ಚಂದ್ರಮುಖ್ತಿ ವಿತರಿಸಲಾಗುತ್ತಿದೆ. ಮುಂಗಾರು ಪೂರ್ವ ಮಳೆಯಾಗಿರುವುದರಿಂದ ರೈತರು ಬೀಜಗಳನ್ನು ಕೊಂಡೊಯ್ಯುತ್ತಿದ್ದು, ಹೊಲಗದ್ದೆಗಳನ್ನು ಸಮತಟ್ಟು ವಾಡಿ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಈ ಬಾರಿ ಬಿತ್ತನೆ ಬೀಜದ ಕೊರತೆ ಇಲ್ಲ. ರೂಪಾ ವಾಡ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕುಂದಾಪುರ https://www.vijayavani.net/huge-loss-in-karkala-due-to-wind-and-rain https://www.vijayavani.net/rain-brings-chaos-in-kundapur