ಜಿಲ್ಲೆಯ ವಿವಿಧಡೆ ಧಾರಾಕಾರ ಮಳೆ

Published on

ಬಳ್ಳಾರಿ ; ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಹಲವಡೆ ರಸ್ತೆಯಲ್ಲೇ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಆಯಿತು. ನಗರದ ಪ್ರಮುಖ ವೃತ್ತಗಳ ರಸ್ತೆಗಳ ಮೇಲೆ ಹರಿದವು. ಇಲ್ಲಿನ ಜಿಲ್ಲಾ ಕ್ರೀಡಾಂಗಣ ರಸ್ತೆಯ ಹಾಗೂ ಎಸ್.ಎನ್.ಪೇಟೆಯ ಅಂಡರ್ ಪಾಸ್‌ನಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರ್ಯಾಯ ರಸ್ತೆಗಳಲ್ಲಿ ಸಂಚಾರಿಸಿದರು. ನಗರದ ದುರ್ಗಮ್ಮ ವೃತ್ತ, ರಾಯಲ್ ವೃತ್ತ, ಸುಧಾ ಕ್ರಾಸ್ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಳೆ ಸುರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net