ಮೈಸೂರಿನಲ್ಲಿ ಮೇ 15 ರಿಂದ 4 ದಿನ ಭಾರಿ ಗಾಳಿ, ಮಳೆ

Rain in mysore
Published on


ಮೈಸೂರು: ಜಿಲ್ಲೆಯಲ್ಲಿ ಮೇ 15 ರಿಂದ 18ರವರೆಗೆ ಗುಡುಗು ಸಹಿತ ಭಾರಿ ಗಾಳಿ, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಮಳೆಯ ಆರ್ಭಟ ಮತ್ತಷ್ಟು ದಿನ ಮುಂದುವರೆಯಲಿದೆ. ಜಿಲ್ಲೆಯಲ್ಲಿ ಮೇ 15 ರಂದು ಸರಾಸರಿ 4 ಮಿ.ಮೀ., 16 ರಂದು 28 ಮಿ.ಮೀ., 17 ರಂದು 28 ಮಿ.ಮೀ., 18 ರಂದು 12 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಾಳಿಯು ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೇ 15 ರಂದು ಕನಿಷ್ಠ 22 ಗರಿಷ್ಠ 38, 16 ರಂದು ಕನಿಷ್ಠ 23 ಗರಿಷ್ಠ 37, 17 ರಂದು ಕನಿಷ್ಠ 22 ಗರಿಷ್ಠ 36, 18 ರಂದು ಕನಿಷ್ಠ 23, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಲೂಕು ವಾರು ವಿವರ: ಎಚ್.ಡಿ. ಕೋಟೆ ತಾಲೂಕಿನಲ್ಲಿ ಮೇ 15, 16 ರಂದು ಮಳೆಯ ಮುನ್ಸೂಚನೆ ಇಲ್ಲ. ಮೇ 17 ಸರಾಸರಿ ರಂದು 3.3 ಮಿ.ಮೀ., 18 ರಂದು 4.4 ಮಿ.ಮೀ., 19 ರಂದು 9.5 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಹುಣಸೂರು ತಾಲೂಕಿನಲ್ಲಿ ಮೇ 15 ರಂದು 0.1 ಮಿ.ಮೀ., 17 ರಂದು 3.3 ಮಿ.ಮೀ, 18 ರಂದು 9.2 ಮಿ.ಮೀ., 19 ರಂದು 5.1 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮೇ 16 ರಂದು ಮಳೆಯ ಮುನ್ಸೂಚನೆ ಇಲ್ಲ.

ಕೆ.ಆರ್. ನಗರ ತಾಲೂಕಿನಲ್ಲಿ ಮೇ 15 ರಂದು 0.5 ಮಿ.ಮೀ., 16 ರಂದು 0.8 ಮಿ.ಮೀ., 17 ರಂದು 2.2 ಮಿ.ಮೀ., 18 ರಂದು 4.5 ಮಿ.ಮೀ., 19 ರಂದು 17.7 ಮಿ.ಮೀ., ನಂಜನಗೂಡು ತಾಲೂಕಿನಲ್ಲಿ 15 ರಂದು 1.4 ಮಿ.ಮೀ., 16 ರಂದು 0.7 ಮಿ.ಮೀ., 17 ರಂದು 0.6 ಮಿ.ಮೀ., 18 ರಂದು 1.4 ಮಿ.ಮೀ., 19 ರಂದು 13.7 ಮಿ.ಮೀ., ಮೈಸೂರು ತಾಲೂಕಿನಲ್ಲಿ 15 ರಂದು 0.5 ಇ.ಮೀ. 16 ರಂದು 0.8 ಮಿ.ಮೀ., 17 ರಂದು 2.2 ಮಿ.ಮೀ., 18 ರಂದು 4.5 ಮಿ.ಮೀ., 19 ರಂದು 17.7 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ.

ಪಿರಿಯಾಪಟ್ಟಣ ತಾಲೂಕಿನಲ್ಲಿ ಮೇ 15 ರಂದು 0.4 ಮಿ.ಮೀ., 17 ರಂದು 4.3 ಮಿ.ಮೀ., 18 ರಂದು 15.4 ಮಿ.ಮೀ., 19 ರಂದು 2.7 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದ್ದು, ಮೇ 16 ರಂದು ಮಳೆಯ ಸಾಧ್ಯತೆ ಇಲ್ಲ. ತಿ.ನರಸೀಪುರ ತಾಲೂಕಿನಲ್ಲಿ ಮೇ 15 ರಂದು 1.9 ಮಿ.ಮೀ., 16 ರಂದು 0.2 ಮಿ.ಮೀ., 18 ರಂದು 1.1 ಮಿ.ಮೀ., 19 ರಂದು 4.3 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮೇ 17 ರಂದು ಮಳೆಯ ಮುನ್ಸೂಚನೆ ಇಲ್ಲ.

ಮೇ ತಿಂಗಳಿನಲ್ಲಿ ಬೆಳೆಯಬಹುದಾದ ಬೆಳಗಳು

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಬೆಳೆಯಬಹುದಾದ ಬೆಳಗಳು ಹಾಗೂ ತಳಿಗಳ ಕುರಿತು ರೈತರಿಗೆ ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ ಅಗತ್ಯ ಸಲಹೆಗಳನ್ನು ನೀಡಿದ್ದಾರೆ.

ರಾಗಿ: ಇಂಡಾಫ್-9, ಜಿಪಿಯು-45, 48, ಮೆಕ್ಕೆಜೋಳ: ಹೇಮಾ, ನಿತ್ಯಶ್ರೀ, ಎಂಎಎಚ್-14-5, ಪಾಪ್ ಕಾರ್ನ್: ಅಂಬರ್, ಶಕ್ತಿಮಾನ್ ಜೋಳ: ಸಿ.ಎಸ್.ವಿ-4, ಸಿ.ಎಸ್.ಎಚ್-5, ಸಿ.ಎಸ್.ಎಚ್-9 ನೆಲಗಡಲೆ: ಜಿಕೆವಿಕೆ-5, ಕೆ.ಸಿ.ಜಿ-6 (ಚಿಂತಾಮಣಿ-6), ಜಿ.ಪಿ.ಬಿ.ಡಿ-4, ಐ.ಸಿ.ಜಿ.ವಿ-91114, ಟಿ.ಎಮ್.ವಿ-2, ಜೆ.ಎಲ್-24 ಸೋಯಾಅವರೆ: ಎಂ.ಎ.ಯು.ಎಸ್-2 (ಪೂಜಾ), ಕರುಣೆ (ತರಕಾರಿ ಸೋಯಾಅವರೆ), ಕೆ.ಬಿ.ಎಸ್-23 ತೊಗರಿ: ಬಿ.ಆರ್.ಜಿ-1, ಬಿ.ಆರ್.ಜಿ -2, ಬಿ.ಆರ್.ಜಿ -3, ಬಿ.ಆರ್.ಜಿ -4, ಬಿ.ಆರ್.ಜಿ -5, ಐಸಿಪಿ-7035, ಟಿ.ಟಿ.ಬಿ-7, ಹೈದರಾಬಾದ್-3ಸಿ ಹೆಸರು: ಪಿ.ಎಸ್-16, ಪೂಸಾ ಬೈಸಾಕಿ, ಪಿ.ಡಿ.ಎಂ-84-178, ಕೆ.ಕೆ.ಎಂ-3 ಉದ್ದು: ಕರಗಾಂವ್-3, ಟಿ-9, ರಶ್ಮಿ, ಎಲ್‌ಬಿಜಿ-791 ಅಲಸಂದೆ: ಟಿ.ವಿ.ಎಕ್ಸ್-944-02-ಇ, ಕೆ.ಬಿ.ಸಿ-1, ಕೆ.ಬಿ.ಸಿ-2, ಕೆ.ಬಿ.ಸಿ-9, ಐ.ಟಿ-98456-1, ಕೆ.ಎಂ-05, ಪಿಜಿಸಿಪಿ-6 ತೋಟಗಾರಿಕಾ ಬೆಳೆಗಳು: ಬಾಳೆ, ಅಡಿಕೆ, ಮೆಣಸಿನಕಾಯಿ, ಟೊಮೆಟೊ, ಆಲೂಗಡ್ಡೆ, ಶುಂಠಿ, ಅರಿಶಿನ. ಮೇವಿನ ಜೋ: ಆಫ್ರಿಕನ್ ಜೋಳ, ಜೋಳ: ಎಂ.ಪಿ.ಚಾರಿ, ಪೂಸಾ, ಚಾರಿ, ಜೆಎಸ್-3, ಜೆಎಸ್-20, ಸಿಒಎಫ್‌ಎಸ್-29, ಸಜ್ಜೆ: ದೀನಬಂಧು-49 ಎ, ಅಲಸಂದೆ : ಕೆಬಿಸಿ-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net