ಮೈಸೂರಿನಲ್ಲಿ ಧಾರಾಕಾರ ಮಳೆ

mysore
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಧಾರಾಕಾರ ಮಳೆಯಾಗಿ ತಂಪು ವಾತಾವರಣ ಮೂಡಿತ್ತು. ಸಂಜೆ 5ರ ಹೊತ್ತಿಗೆ ತುಂತುರು ಹನಿ ಆರಂಭವಾಗಿ ಬಳಿಕ ಉತ್ತಮ ಮಳೆಯಾಯಿತು. ತಡ ರಾತ್ರಿ ವರೆಗೂ ಜಿಟಿ ಜಿಟಿ ಸುರಿಯಿತು.


ಚಾಮುಂಡಿಪುರಂ, ಲಕ್ಷ್ಮೀ ್ಮಪುರಂ, ಕುವೆಂಪುನಗರ, ಸರಸ್ವತಿಪುರಂ, ನಜರ್‌ಬಾದ್ ಸೇರಿದಂತೆ ನಗರದ ವಿವಿಧ ಬಡಾವಣೆಯಲ್ಲೂ ವರ್ಷಧಾರೆ ಅಬ್ಬರಿಸಿದೆ. ವಿಜಯನಗರದ ಎಲ್‌ಐಸಿ ಕಚೇರಿ ಬಳಿ ಮರ ಬಿದ್ದಿದೆ. ಪಾಲಿಕೆ ಅಭಯ್ ತಂಡದವರು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಮಳೆ ಪ್ರಾರಂಭವಾಗುತ್ತಿದ್ದಂತೆ ಜನರು ಮನೆ ಸೇರಿಕೊಂಡರು. ಕೆಲವರು ಸ್ಥಳೀಯ ಬಸ್‌ನಿಲ್ದಾಣ, ಕಟ್ಟಡಗಳಲ್ಲಿ ಆಶ್ರಯ ಪಡೆದರು.


ಮಳೆಯಿಂದ ಬೀದಿ ಬದಿಯ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಹಣ್ಣು-ತರಕಾರಿ ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಯಿತು. ಪಾನಿಪುರಿ, ಗೋಬಿ ಸೇರಿದಂತೆ ಹಲವು ಚಾಟ್ ಸೆಂಟರ್ ಮಾಲೀಕರು ಟಾರ್ಪಲ್ ಕಟ್ಟಿಕೊಂಡು ಕೆಲ ಸಮಯ ವ್ಯಾಪಾರ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net