ಜುಲೈ ಮಳೆಗೆ ಜಿಲ್ಲೆಯಲ್ಲಿ ಅಪಾರ ಹಾನಿ

oplus_131074
oplus_131074
Published on

ಮಡಿಕೇರಿ:

ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದೆ. ಜುಲೈ ಮಧ್ಯಭಾಗದ ನಂತರ ಸುರಿದ ಮಳೆ ಜಿಲ್ಲೆಯಲ್ಲಿ ಸಾಕಷ್ಟು ಹಾನಿಗೆ ಕಾರಣವಾಗಿದೆ. ಪ್ರಮುಖ ವಾಣಿಜ್ಯ ಬೆಳೆ ಕಾಫಿ ಕಳೆದ ವರ್ಷ ಮಳೆ ಇಲ್ಲದೆ ಬೆಳೆಗಾರನಿಗೆ ಕೈ ಕೊಟ್ಟಿದ್ದರೆ, ಈ ಬಾರಿ ಮಳೆ ಹೆಚ್ಚಾಗಿ ಗಿಡದಲ್ಲೇ ಕೊಳೆಯಲಾರಂಭಿಸಿದೆ. ಕಾಫಿ ತೋಟದಲ್ಲಿ ಉಪ ಬೆಳೆಯಾಗಿ ಬೆಳೆದರೂ ಬೆಳೆಗಾರರಿಗೆ ಕೈತುಂಬಾ ಕಾಸು ಕೊಡುವ ಕರಿಮೆಣಸು ಕೂಡ ಈ ಬಾರಿ ನೆಲಕಚ್ಚಿದೆ. ಕೆಲವೆಡೆ ಕರಿಮೆಣಸು ಬಳ್ಳಿಗಳೇ ಹಾಳಾಗಿವೆ. ಅಡಿಕೆ, ಬಾಳೆ, ಶುಂಠಿಯದ್ದು ಕೂಡ ಇದೇ ಕಥೆ

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ ಇಳಕೆ ಆಗುತ್ತಿದೆ. ಆದರೂ ಕೆಲವು ಉತ್ಸಾಹಿ ರೈತರು ಸಾಂಪ್ರದಾಯಿಕ ಭತ್ತದ ಬೆಳೆ ಬೆಳೆಯುವುದನ್ನು ನಿಲ್ಲಿಸಬಾರದು ಎನ್ನುವ ಕಾರಣಕ್ಕೆ ಭತ್ತದ ಬೇಸಾಯ ಮುಂದುವರಿಸಿದ್ದಾರೆ. ಆದರೆ ಈ ಬಾರಿಯ ಅತಿವೃಷ್ಟಿ ಈ ರೈತರ ಉತ್ಸಾಹಕ್ಕೆ ತಣ್ಣೀರು ಎರಚಿದೆ. ಬಹುತೇಕ ಕಡೆಗಳಲ್ಲಿ ನದಿ, ತೊರೆ ದಡದ ಗದ್ದೆಗಳಿಗೆ ಪ್ರವಾಹದ ನೀರು ನುಗ್ಗಿ ಈಗಾಗಲೇ ಆಗಿದ್ದ ನಾಟಿಯನ್ನು ಹಾಳುಗೆಡವಿದೆ. ನಾಟಿಗೆ ಸಿದ್ದವಾಗಿದ್ದ ಪೈರು ಕೊಳೆತು ಹೋಗಿದೆ.

ಇತ್ತೀಚೆಗೆ ಜಿಲ್ಲೆಗೆ ಭೇಟಿ ಕೊಟ್ಟಿದ್ದ ಮುಖ್ಯಮಂತ್ರಿ ಆದಿಯಾಗಿ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ಕೊಟ್ಟಿದ್ದಾರೆ. ಆದರೆ ಎಷ್ಟರ ಮಟ್ಟಿಗೆ ಬೆಳೆ ಹಾನಿ ಆಗಿದೆ ಎನ್ನುವುದರ ಬಗ್ಗೆ ಇನ್ನು ಕೂಡ ಎಲ್ಲಿಯೂ ಸಮೀಕ್ಷೆ ಆರಂಭ ಆಗಿಲ್ಲ. ಕಾಫಿ ಮಂಡಳಿ ವತಿಯಿಂದ ಕೆಲವು ಕಡೆಗಳಲ್ಲಿ ತೋಟಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿರುವುದು ಹೊರತುಪಡಿಸಿದರೆ ಅಧಿಕೃತವಾಗಿ ನಷ್ಟದ ಅಂದಾಜು ನಡೆಸುವ ಕಾರ್ಯವೇ ನಡೆದಿಲ್ಲ ಎನ್ನುತ್ತಾರೆ ಬೆಳೆಗಾರರು. ಹಾನಿ ಸಮೀಕ್ಷೆ ನಡೆಸಲು ಇದು ಸೂಕ್ತ ಸಮಯವಾಗಿದ್ದು, ಈಗ ಸರ್ವೆ ನಡೆಸಿದ್ದರೆ ಸರ್ಕಾರದಿಂದ ಪರಿಹಾರ ಸಿಗುವುದು ದೂರದ ಮಾತು ಎನ್ನುವ ಆತಂಕವನ್ನೂ ವ್ಯಕ್ತಪಡಿಸಲಾಗುತ್ತಿದೆ. ಈ ಬಗ್ಗೆ ಇಂದಿನ ಲೌಡ್ ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜುಲೈನಲ್ಲಿ ಸುರಿದ ಧಾರಾಕಾರ ಮಳೆಯಿಂದ ಗರ್ವಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಸೂರ್ಲಬ್ಬಿ, ಕಿಕ್ಕರಳ್ಳಿ, ಮಂಕ್ಯಾ ಮತ್ತು ಅಕ್ಕ ಪಕ್ಕದ ಗ್ರಾಮಗಳಲ್ಲಿ ದೊಡ್ಡ ಮಟ್ಟದ ನಷ್ಟವಾಗಿದೆ. ಬತ್ತದ ಸಸಿ ಮಡಿಗೆ ಹಾನಿಯಾಗಿದೆ. ಹಾಗಾಗಿ ಬಡ ರೈತರಿಗೆ ಸೂಕ್ತ ಪರಿಹಾರ ಸಿಗಬೇಕು. ದಾಖಲಾತಿ ಸಮಸ್ಯೆ ನೆಪದಲ್ಲಿ ಇದುವರೆಗೂ ಅನೇಕ ರೈತರಿಗೆ ಮಳೆಹಾನಿ ಪರಿಹಾರ ಸಿಗುತ್ತಿಲ್ಲ. ಇನ್ನಾದರೂ ಪರಿಹಾರ ಸಿಗಲಿ.
ಜಯಂತಿ, ರೈತ ಮಹಿಳೆ, ಸೂರ್ಲಬ್ಬಿ ಗ್ರಾಮ

ಪ್ರಸಕ್ತ ಸುರಿದ ಮುಂಗಾರು ಮಳೆಯಿಂದ ಕಾಫಿ, ಕಾಳುಮೆಣಸಿಗೆ ತುಂಬಾ ಹಾನಿಯಾಗಿದೆ. ಕಾಫಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆಯವರು ವೈಜ್ಞಾನಿಕವಾಗಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿಬೇಕು. ಮಳೆ ನಿಂತ ಮೇಲೆ ಸರ್ವೇ ಮಾಡಿದರೆ ಪ್ರಯೋಜನ ಇಲ್ಲ. ಬಿಸಿಲು ಬಂದ ಮೇಲೆ ಕಾಫಿ ಗಿಡಗಳು ಹಸಿರು ಇರುತ್ತದೆ. ಆದರೆ ಕಾಫಿ ಉದುರಿ ಹೋಗಿರುತ್ತದೆ. ಕಾಫಿ, ಕಾಳು ಮೆಣಸು ಬೆಳಗಾರರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಬೇಕು.
ಮಾಚಯ್ಯ, ಕಾಫಿ ಬೆಳೆಗಾರ, ಸಿಂಗನಹಳ್ಳಿ ಗ್ರಾಮ, ಸೋಮವಾರಪೇಟೆ

ಈ ವ?ರ್ದ ಅತಿ ಹೆಚ್ಚು ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ನ?್ಟಕ್ಕೆ ಸರಕಾರದ ಕಡೆಯಿಂದ ಪರಿಹಾರ ಸಿಕ್ಕಿದರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ ಇನ್ನೂ ಸಮೀಕ್ಷೆಯನ್ನೇ ನಡೆಸದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಕೂಡಲೇ ಕೃಷಿ ಇಲಾಖೆಯವರು ರೈತರ ಬೆಳೆ ನ?್ಟಕ್ಕೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು.
ಅಕ್ಷಯ್, ಸಮಾಜ ಸೇವಕರು, ಗೋಣಿಕೊಪ್ಪ

ಈ ಬಾರಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆ ನ?್ಟ ಉಂಟಾಗಿದೆ. ಸರ್ಕಾರ ರೈತರಿಗೆ ಪರಿಹಾರ ಘೋ?ಣೆ ಮಾಡಬೇಕು. ವೈಜ್ಞಾನಿಕ ರೀತಿಯಲ್ಲಿ ಬೆಳೆ ನ?್ಟ ಕುರಿತು ವರದಿ ನೀಡಬೇಕು. ಆಗ ಮಾತ್ರ ರೈತರಿಗೆ ಸಹಾಯ ಆಗಲಿದೆ.
ಜಶ್ಮಿ ಚಿಂತು, ಉಪನ್ಯಾಸಕಿ, ಗೋಣಿಕೊಪ್ಪ

ಈ ವ?ರ್ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ಶೇ.೪೦ ರಿಂದ ಶೇ. ೫೦ರ?್ಟು ಕಾಫಿ ಬೆಳೆ ಹಾನಿಯಾಗಿದೆ. ಒಂದು ಕಡೆ ಗಿಡದಲ್ಲಿ ಕಾಫಿ ಕೊಳೆಯುತ್ತಿದೆ. ಮತ್ತೊಂದೆಡೆ ಹಸಿ ಕಾಫಿ ಗಿಡದಲ್ಲಿಯೇ ಸಡಿಲಗೊಂಡು ಉದುರುತ್ತಿದೆ. ಕರಿಮೆಣಸು ಕೂಡ ಫಸಲು ಕಟ್ಟುತ್ತಿಲ್ಲ. ಅಡಿಕೆ ಬೆಳೆ ಉದುರುತ್ತಿದೆ. ಆದರೂ ಸರ್ವೆ ನಡೆಸಲು ನಡೆಸಲು ಯಾವ ಅಧಿಕಾರಿಯೂ ಬಂದಿಲ್ಲ. ಈ ಹಿಂದಿನ ಸರ್ಕಾರ ಆ್ಯಪ್ ಮೂಲಕ ರೈತರಿಂದಲೇ ಸರ್ವೆ ನಡೆಸಿ ಪರಿಹಾರ ನೀಡುತಿತ್ತು. ಆದರೆ ಈ ಸರ್ಕಾರದ ನಡೆ ನೋಡಿದರೆ ರೈತರಿಗೆ ಪರಿಹಾರ ಮರಿಚಿಕೆ ಎನಿಸುತ್ತದೆ.
ರಾಮಮೂರ್ತಿ ಕೆ.ಜಿ., ಕಾಫಿ ಬೆಳೆಗಾರ, ರಾಮನಗರ, ವಿರಾಜಪೇಟೆ

ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ರೈತರ ಮತ್ತು ಬೆಳೆಗಾರರ ನೆರವಿಗೆ ಬರಬೇಕಾಗಿದೆ. ಸರ್ಕಾರದಿಂದ ಸೂಕ್ತ ಸ್ಪಂದನೆ ಬಾರದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಳೆಗಾರರು ಮತ್ತು ರೈತರ ಪರಿಸ್ಥಿತಿ ಇನ್ನ?್ಟು ಹದಗೆಡಲಿದೆ. ಇದನ್ನು ಅರಿತು ಬೆಳೆ ನ?್ಟದ ಸಮೀಕ್ಷೆ ನಡೆಸಿ ಕೂಡಲೇ ಪರಿಹಾರ ಒದಗಿಸಬೇಕು. ಸರ್ಕಾರ ಎಚ್ಚೆತ್ತು ರೈತರ ನೆರವಿಗೆ ಬರಬೇಕು.
ಬಿ.ಎಸ್. ಅನಂತ್ ಕುಮಾರ್, ಕಾರ್ಯದರ್ಶಿ, ಕೊಡಗು ಜಿಲ್ಲಾ ಬಿಜೆಪಿ

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಮತ್ತು ಗಾಳಿ ರೈತರ ಬಾಳಲ್ಲಿ ಶೋಚನೀಯ ಪರಿಸ್ಥಿತಿ ನಿರ್ಮಾಣ ಮಾಡಿದೆ. ರೈತರ ಕ?್ಟವನ್ನು ಕೇಳುವರಿಲ್ಲದಂತಾಗಿದೆ. ಭತ್ತದ ಪೈರು ನೀರಿನಲ್ಲಿ ಕೊಚ್ಚಿಹೊಗಿದೆ, ಕಾಫಿ ಕಾಯಿಗಳು ನೆಲಕಚ್ಚಿದೆ. ರೈತರು ಬೆಳೆದ ಬೆಳೆ ಸರಿಯಾಗಿ ನಿರಿಕ್ಷಿಸಿದ?್ಟು ಆದಾಯ ಬಂದರೆ ಯಾವುದೇ ಪರಿಹಾರ ಕೇಳುವುದಿಲ್ಲ. ಆದರೆ ಈಗ ಪರಿಸ್ಥಿತಿ ಆ ರೀತಿಯಲ್ಲಿ ಇಲ್ಲ.
ಎಸ್.ಎನ್. ರಘು, ಗ್ರಾಮ ಪಂಚಾಯತಿ ಸದಸ್ಯ, ಶನಿವಾರಸಂತೆ

ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸುವುದು ಕೊಡಗಿನಲ್ಲಿ ಅಧಿಕಾರಿಗಳಿಗೆ ಕಷ್ಟದ ಕೆಲಸ. ತೋಟ ಅಥವಾ ಗದ್ದೆಯ ಮಾಲೀಕ ಒಬ್ಬನಾದರೂ ಆರ್‌ಟಿಸಿಯಲ್ಲಿ ಹತ್ತಾರು ಹೆಸರುಗಳು ಇರುತ್ತದೆ. ಇದರಿಂದ ಸೂಕ್ತ ರೀತಿಯಲ್ಲಿ ಪರಿಹಾರ ವಿತರಣೆ ಕಷ್ಟಸಾಧ್ಯ. ಬೆಳೆಹಾನಿಯ ಸಮೀಕ್ಷೆ ಮತ್ತು ಪರಿಹಾರ ವಿತರಣೆ ಪಾರದರ್ಶಕವಾಗಿರಬೇಕು. ನ್ಯಾಯಯುತವಾಗಿ ನಡೆಯಬೇಕು.
ಸೂದನ ಈರಪ್ಪ, ಅಧ್ಯಕ್ಷ, ಕೊಡಗು ಏಲಕ್ಕಿ ಸಹಕಾರ ಸಂಘ

ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸುರಿದ ಮಳೆ ಮತ್ತು ಕಾಡಾನೆಗಳ ಹಾವಳಿಯಿಂದ ರೈತರ ಹಲವಾರು ಬೆಳೆಗಳು ಹಾನಿಯಾಗಿದೆ. ರೈತರು ಕೂಡ ಹೆಚ್ಚು ನಷ್ಟ ಅನುಭವಿಸುವಂತಾಗಿದೆ.
ಸರ್ಕಾರ ಕಾಟಾಚಾರಕ್ಕೆ ಬೆಳೆನಷ್ಟದ ಅಂದಾಜು ಸರ್ವೆ ನಡೆಸದೇ ಸಮರ್ಪಕವಾಗಿ ಸರ್ವೆ ಕಾರ್ಯ ನಡೆಸಿ ರೈತರಿಗೆ ಪರಿಹಾರ ನೀಡಬೇಕಾಗಿದೆ.
ಇಟ್ಟಿರ ಮುನ್ನ ಗಣಪತಿ, ಕಾಫಿ ಬೆಳೆಗಾರ, ಮಾಲ್ದಾರೆ

ಮಳೆಯಿಂದಾಗಿ ಜಿಲ್ಲೆಯಾದ್ಯಂತ ಆಗಿರಬಹುದಾದ ಬೆಳೆ ಹಾನಿ ಬಗ್ಗೆ ವರದಿಗಳನ್ನು ತರಿಸಲಾಗುತ್ತಿದೆ. ಕಾಫಿ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಕಾಫಿ ಮಂಡಳಿಯಿಂದ ಪರಿಶೀಲನೆ ನಡೆಸಲಾಗುತ್ತಿದೆ. ಅವರು ಕೂಡ ಬೆಳೆ ಹಾನಿ ವರದಿ ಕೊಡುತ್ತಾರೆ. ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಹಾನಿಯ ಪ್ರಮಾಣ ಕಂಡು ಬಂದರೆ ಸರ್ವೇ ಕಾರ್ಯ ನಡೆಸಲಾಗುವುದು. ಭೂಕುಸಿತ, ಬರೆ ಜರಿತ, ಮರಗಳು ಬಿದ್ದು ಹಾನಿ ಈ ರೀತಿಯ ಪ್ರಕರಣಗಳಲ್ಲಿ ಆಗಿರುವ ಬೆಳೆ ಹಾನಿಯ ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ನಡೆದಿದೆ.
ಹೆಚ್.ಆರ್. ಯೋಗೇಶ್, ಉಪ ನಿರ್ದೇಶಕ, ತೋಟಗಾರಿಕಾ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net