ಮೃಘಶಿರ ಮಳೆಯ ಅಬ್ಬರ ಜನಜೀವನ ತತ್ತರ

12 Dwd 2A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಾದ್ಯಂತ ಕೆಲ ದಿನ ಬಿಡುವು ಪಡೆದಿದ್ದ ಮಳೆ ಬುಧವಾರ ಸಂಜೆಯಿ0ದ ಬಿರುಸಿನಿಂದ ಸುರಿಯುತ್ತಿದೆ. ಜಿಲ್ಲೆಯ ನವಲಗುಂದ, ಹುಬ್ಬಳ್ಳಿ ಹಾಗೂ ಇತರೆಡೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಜೂ. 7ರಿಂದ ಆರಂಭವಾಗಿರುವ ಮೃಘಶಿರ ಮಳೆ ಅಲ್ಲಲ್ಲಿ ಅವಾಂತರ ಸೃಷ್ಟಿಸಿದೆ. ಜೂ. 11ರ ಬೆಳಗ್ಗೆ 8.30ರಿಂದ ಜೂ. 12ರ ಬೆಳಗ್ಗೆ 8.30ರವರೆಗೆ ಜಿಲ್ಲೆಯಾದ್ಯಂತ 4.7 ಮಿ.ಮೀ. ಮಳೆ ನಿರೀಕ್ಷಿಸಲಾಗಿತ್ತು. ಈ ಅವಽಯಲ್ಲಿ 40.9 ಮಿ.ಮೀ. ಮಳೆಯಾಗಿದೆ. ಹುಬ್ಬಳ್ಳಿ ತಾಲೂಕಿನ ಶಿರುಗುಪ್ಪಿ ಹೋಬಳಿಯಲ್ಲಿ 90.8 ಮೀ.ಮೀ. ಗರಿಷ್ಠ ಹಾಗೂ ಅಳ್ಳಾವರ ತಾಲೂಕಿನ ಅಳ್ಳಾವರ ಹೋಬಳಿಯಲ್ಲಿ 4.8 ಮೀ.ಮೀ. ಕನಿಷ್ಠ ಮಳೆಯಾಗಿರುವ ವರದಿಯಾಗಿದೆ. ಹವಾಮಾನ ವರದಿಯಂತೆ ಜೂ. 13 ಮತ್ತು 14ರಂದು ಆರೆಂಜ್ ಅಲರ್ಟ್ ಇರಲಿದೆ.

* ಮನೆಗಳಿಗೆ ಹಾನಿ:

ನಿರಂತರ ಮಳೆಯಿಂದಾಗಿ ನವಲಗುಂದದಲ್ಲಿ 23 ಮನೆ, ಅಣ್ಣಿಗೇರಿಯಲ್ಲಿ 15, ಹುಬ್ಬಳ್ಳಿ ನಗರದಲ್ಲಿ 3 ಹಾಗೂ ಕುಂದಗೋಳದಲ್ಲಿ 2 ಸೇರಿ 45 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

* ವೈಲವಾಡದಲ್ಲಿ ಅತಿ ಹೆಚ್ಚು ಮಳೆ

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ವೈಲವಾಡದಲ್ಲಿ 257 ಮಿ.ಮೀ. ಮಳೆಯಾಗಿದ್ದು, ರಾಜ್ಯದಲ್ಲೇ ಗರಿಷ್ಠ ಮಳೆ ದಾಖಲಾಗಿದೆ. ಕಾರವಾರ ತಾಲೂಕಿನ ಶಿರವಾಡದಲ್ಲಿ 264.5 ಮಿ.ಮೀ. ಮಳೆಯಾಗಿದ್ದು ದ್ವಿತೀಯ ಸ್ಥಾನ ಹಾಗೂ ಕಾರವಾರ ತಾಲೂಕಿನ ಕಡವಾಡದಲ್ಲಿ 256 ಮಿ.ಮೀ. ಮಳೆಯಾಗಿ ತೃತೀಯ ಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net