

ಮುಂಡಗೋಡ: ತಾಲೂಕಿನ ಇಂದೂರ ಭಾಗದಲ್ಲಿ ಮಂಗಳವಾರ ಬೀಸಿದ ಭಾರಿ ಬಿರುಗಾಳಿ ಮಳೆಗೆ ಮೂರ‌್ನಾಲ್ಕು ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು ಬಾಳೆ ತೋಟವೊಂದಕ್ಕೆ ಹಾನಿಯಾಗಿದೆ.
ಅಲ್ಲದೆ, ಮಳೆಯ ನೀರು ಮನೆಯೊಳಗೆ ನುಗ್ಗಿ ಹಾನಿ ಸಂಭವಿಸಿದೆ. ಬಿರುಗಾಳಿಗೆ ಸಹದೇವ ನಡಗೇರಿ ಎಂಬುವರ ತೋಟದಲ್ಲಿನ ಬಾಳೆಗಿಡಗಳು ನೆಲಕಚ್ಚಿವೆ. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಗೋಪಾಲ ಹಾಗೂ ಪಂಚಾಯತ್ ರಾಜ್‌ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್ ಪ್ರದೀಪ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಮಾಡಿದ್ದಾರೆ.