ಧಾರಾಕಾರ ಮಳೆಗೆ ಅಂಕುಶದೊಡ್ಡಿಯಲ್ಲಿ ಮನೆಯ ಛತ್ತು ಕುಸಿದು ಮಹಿಳೆಗೆ ಗಾಯ, ಆಸ್ಪತ್ರಗೆ ದಾಖಲು

211020 Ankushadoddi Women Injury
ಮಸ್ಕಿ ತಾಲೂಕಿನ ಅಂಕುಶದೊಡ್ಡಿಯಲ್ಲಿ ಮನೆಯ ಛತ್ತು ಬಿದ್ದಿರುವುದು. (ಮನೆಯ ಛತ್ತು ಬಿದ್ದು ಗಾಯಗೊಂಡ ಶಾಂತಮ್ಮ)
Published on

ಮಸ್ಕಿ: ಅಂಕುಶದೊಡ್ಡಿಯಲ್ಲಿ ಬುಧವಾರ ಬೆಳಗಿನ ಜಾವ ಮಳೆಗೆ ನೆನೆದು ಛತ್ತು ಕುಸಿದು ಬಿದ್ದು ಶಾಂತಮ್ಮ ಅಮರೇಶ ಪೂಜಾರಿ ಎಂಬುವರು ಗಾಯಗೊಂಡಿದ್ದಾರೆ.

ಛತ್ತು ಕುಸಿದು ಬಿದ್ದು ಮಣ್ಣಿನಡಿ ಸಿಲುಕಿದ್ದ ಮಹಿಳೆಯನ್ನು ಪಕ್ಕದ ಮನೆಯವರು ಹೊರತೆಗೆದು ರಕ್ಷಿಸಿದ್ದಾರೆ. ಮನೆ ಛತ್ತು ಬಿದ್ದ ರಭಸಕ್ಕೆ ಕಾಲಿಗೆ ಗಾಯವಾಗಿದ್ದು, ಮಸ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ವಿವಿಧಡೆ ಮಂಗಳವಾರ ರಾತ್ರಿ ಗಾಳಿ-ಮಳೆಗೆ ಮನೆಗಳು ಬಿದ್ದು, ಕೆಲವೆಡೆ ಸಂಚಾರ ಅಸ್ತವ್ಯಸ್ತವಾಯಿತು. ಮಸ್ಕಿ ಪಟ್ಟಣದ ಹಳ್ಳಕ್ಕೆ ಹೊಂದಿಕೊಂಡ ಅನೇಕ ಮನೆಗಳು ಬಿದ್ದಿವೆ. ಅಂಬೇಡ್ಕರ್ ನಗರದಲ್ಲಿ ಪುರಸಭೆ ಸಿಬ್ಬಂದಿ ಆಂಜನೇಯನ ಮನೆ ಮುಂದಿನ ಭಾಗ ಬಿದಿದ್ದೆ. ರಂಗಾಪುರ ಗ್ರಾಮದ ಹೊರವಲಯದಲ್ಲಿ ಹನುಮಂತ ನಾಯಕ ಅವರ ಹೊಲದಲ್ಲಿ ಭತ್ತ ನೆಲಕ್ಕಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net