ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ ರಾತ್ರಿಯಿಡೀ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಮಳೆಯಿಂದಾಗಿ ಬೇಡ್ತಿ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಅಪಾರ ಏರಿಕೆಯಾಗಿದೆ. ಗುಳ್ಳಾಪುರ, ಕಲ್ಲೇಶ್ವರ, ಹಳವಳ್ಳಿ ಭಾಗದ ಜನರು ಆತಂಕಗೊಳ್ಳುವಂತಾಗಿತ್ತು. ಬುಧವಾರ ಬೆಳಗ್ಗೆ ಮಳೆ ಕಡಿಮೆಯಾಗಿದ್ದು, ನೀರಿನ ಪ್ರಮಾಣವೂ ತಗ್ಗಿದೆ.