ನಿರಂತರವಾಗಿ ಸುರಿಯುತ್ತಿರುವ ಮಳೆ: ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ

rain
Published on

ಮಂಡ್ಯ: ಸತತ ಮಳೆ ಹಿನ್ನೆಲೆಯಲ್ಲಿ ಮಾರ್ಕೋನಹಳ್ಳಿ ಜಲಾಶಯ ಭರ್ತಿ ಆಗಿದೆ. ಈ ಹಿನ್ನೆಲೆಯಲ್ಲಿ ಹೊಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುವ ಸಂಭವವಿದ್ದು, ಯಾವುದೇ ಸಮಯದಲ್ಲಿ ಶಿಂಷಾ ನದಿಗೆ ನೀರನ್ನು ಬಿಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಆದ್ದರಿಂದ ನಾಗಮಂಗಲ ತಾಲೂಕಿನ ಮಲ್ಲನಕೊಪ್ಪಲು, ದೊಡ್ಡ ಉಪ್ಪಳ, ತಿಗಳರಕೊಪ್ಪಲು, ಬಳ್ಳಕೆರೆ, ಹದಮಗೆರೆ, ಅರಕೆರೆ. ಚೊಟ್ಟನಹಳ್ಳಿ, ಕುಡಗುಬಾಳು ಹಾಗೂ ಮದ್ದೂರು ತಾಲೂಕಿನ ಕೌಡ್ಲೆ, ಯಡವನಹಳ್ಳಿ, ಬೆಕ್ಕಳಲೆ, ಪಟೇಲನಕೊಪ್ಪಲು, ಕಿರಂಗೂರು ಹಾಗೂ ಇನ್ನಿತರೆ ಶಿಂಷಾ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net