

ಕಾರವಾರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅನಾಹುತಗಳ ಸರಣಿಯೇ ನಡೆದಿದೆ. ಜು.20 ರಂದೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಾಲೆ, ಪಿಯು, ಐಟಿಐ ಹಾಗೂ ಡಿಪ್ಲೊಮಾ ಕಾಲೇಜ್‌ಗಳಿಗೆ ಜು.20 ರಂದೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ. ,ಕಾರವಾರ ತಾಲೂಕಿನ 6 , ಅಂಕೋಲದ 6, ಕುಮಟಾದ 5, ಹೊನ್ನಾವರದ 13 ಸೇರಿದಂತೆ ಒಟ್ಟು 30 ಕಾಳಜಿ ಕೇಂದ್ರಗಳಲ್ಲಿ 2,373 ಮಂದಿ ಆಶ್ರಯ ಒದಗಿಸಲಾಗಿದೆ.
ಕಾರವಾರ-ಕೈಗಾ ರಸ್ತೆಯ ಮಂದ್ರಾಳಿ ಸಮೀಪ ಗುಡ್ಡ ಕುಸಿತದಿಂದ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಶುಕ್ರವಾರ ಕುಸಿದ ಗುಡ್ಡ ತೆರವು ಮಾಡಲಾಗಿದೆ. ಆದರೆ, ಮತ್ತೆ ಗುಡ್ಡ ಕುಸಿಯುವ ಆತಂಕ ಇರುವುದರಿಂದ ಒಂದು ದಿನ ಪರಿಶೀಲಿಸಿ ನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪಿಡಬ್ಲುಡಿ ಎಇಇ ರಾಮು ಅರ್ಗೇಕರ್ ತಿಳಿಸಿದ್ದಾರೆ.