ಮಧೂರು ದೇಗುಲಕ್ಕೆ ನುಗ್ಗಿದ ನೀರು ಅಪಾಯದ ಮಟ್ಟ ಮೀರಿದ ಮಧುವಾಹಿನಿ ನದಿ

KSD-6JULY-6
Published on

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಗುರುವಾರ ಮತ್ತು ಶುಕ್ರವಾರ ರೆಡ್ ಅಲರ್ಟ್ ಘೋಷಿಸಲಾಗಿದೆ.

ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಮಧೂರು ಮಧುವಾಹಿನಿ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದೊಳಗೆ ನೀರು ನುಗ್ಗಿದೆ. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸೊಂಟದವರೆಗಿನ ನೀರಲ್ಲಿ ಸಾಗಿ ದೇವರ ದರ್ಶನ ಪಡೆದರು.


ವೀರಮಲಕುನ್ನುವಿನಲ್ಲಿ ಭೂಕುಸಿತ: ಚೆರುವತ್ತೂರು ವೀರಮಲಕುನ್ನುವಿನಲ್ಲಿ ಭಾರಿ ಭೂಕುಸಿತವುಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 7ರ ಸಂಜೆ 6ರವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಜಿಲ್ಲಾಧಿಕಾರಿ ನಿರ್ದೇಶಾನುಸಾರ ಪ್ರಯಾಣಿಕರ ವಾಹನಗಳನ್ನು ಬೇರೆ ಹಾದಿಯಾಗಿ ಸಂಚರಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ದ್ವಿಚಕ್ರ ವಾಹನಗಳು, ಕಾರು, ಬಸ್‌ಗಳು ಮತ್ತು ಆಟೋರಿಕ್ಷಾ ಸೇರಿದಂತೆ ಪ್ರಯಾಣಿಕರ ವಾಹನಗಳನ್ನು ಕೊಟ್ಟಪುರಂ ಸೇತುವೆ ರಸ್ತೆ ಮೂಲಕ ಚೆರುವತ್ತೂರು ಹಾದಿಯಾಗಿ ಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net