ಭಾರಿ ಮಳೆ ಸಾಧ್ಯತೆ! ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ..Weather

Heavy Rain
Published on
Weather: ರಾಜ್ಯದಲ್ಲಿ ಬೇಸಿಗೆಗೆ ಒಂದು ಕಡೆಯಾದ್ರೆ ಇತ್ತ ಕೆಲವು ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದೆ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 13ರವರೆಗೂ  ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತ ಪರಿಚಲನೆಯು ತಮಿಳುನಾಡು ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ತರಿಸಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ, ಇನ್ನುಳಿದ ದಿನಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ವಾರ ಪೂರ್ತಿ ಮಳೆಯಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಕೃಷ್ಣರಾಜಪೇಟೆ, ಆಗುಂಬೆ, ಪುತ್ತೂರು, ಬೆಳ್ತಂಗಡಿ, ಕಮ್ಮರಡಿ, ಕಳಸ, ನಾಪೋಕ್ಲು, ಕಾರ್ಕಳ, ಯಲ್ಲಾಪುರ, ಮಸ್ಕಿ, ಲಿಂಗಸುಗೂರು, ಕಕ್ಕೇರಿ, ಮುದ್ದೇಬಿಹಾಳ, ನಾಗಮಂಗಲ, ಅಜ್ಜಂಪುರ, ಹೊನ್ನಾಳಿ, ಸಿದ್ದಾಪುರ, ಬನವಾಸಿ, ಉಪ್ಪಿನಂಗಡಿ, ಬಬಲೇಶ್ವರ, ಕೂಡಲಸಂಗಮ, ಹುಂಚದಕಟ್ಟೆ, ಎಚ್​ಡಿ ಕೋಟೆ, ಟಿಜಿ ಹಳ್ಳಿಯಲ್ಲಿ ಮಳೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net