

ರಾಯಚೂರು ನಗರ ಸೇರಿ ಜಿಲ್ಲಾದ್ಯಂತ ಶನಿವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದು, ನಗರದ ನಾನಾ ರಸ್ತೆ ಮೇಲೆ ಚರಂಡಿ ನೀರು ಹರಿದು ಸಾರ್ವಜನಿಕರಿಗೆ ತೊಂದರೆ ಎದುರಾಯಿತು.
ಬೆಳಗ್ಗೆಯಿಂದ ರಣ ಬಿಸಿಲಿಗೆ ಹೈರಾಣದ ಜನರಿಗೆ ಮಧ್ಯಾಹ್ನ ಸುರಿದ ಮಳೆಗೆ ತುಸು ನೆಮ್ಮದಿ ತಂದಿತು. ಮಳೆಯಲ್ಲಿ ಬಿರುಗಾಳಿ ಅರ್ಭಟ ಜೋರಾಗಿತ್ತು. ನಗರದ ಚಂದ್ರವೌಳೇಶ್ವರ ವೃತ್ತ, ಪಟೇಲ್ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಚರಂಡಿ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.