ಸೋಮವಾರಪೇಟೆ ತಾಲೂಕಿನಲ್ಲಿ ಭಾರಿ ಮಳೆ

Heavy rain in Somwarpet taluk
Published on

ಮಡಿಕೇರಿ:

ಜಿಲ್ಲೆಯ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಸೋಮವಾರಪೇಟೆ ತಾಲೂಕು ಶಾಂತಳ್ಳಿ ಹೋಬಳಿಯಲ್ಲಿ ಅತ್ಯಧಿಕ ಅಂದರೆ 216 ಮಿಮೀ ಮಳೆ ಬಂದಿದೆ. ಜಿಲ್ಲಾ ಕೇಂದ್ರ ಮಾಡಿಕೇರಿ ಸೇರಿದಂತೆ ಉಳಿದೆಡೆ ಸಾಧಾರಣ ಮಳೆ ಆಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಸೋಮವಾರಪೇಟೆ ತಾಲೂಕು ಶಾಂತಳ್ಳಿ ಹೋಬಳಿ ತೋಳೂರು ಶೆಟ್ಟಳ್ಳಿ ಗ್ರಾಮದ ನಿವಾಸಿ ಕೆ.ಜೆ. ಪಾರ್ವತಿ ಜೋಯಪ್ಪ ಎಂಬವರ ವಾಸದ ಮನೆ ಗೋಡೆ ಮತ್ತು ಛಾವಣಿ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸೋಮವಾರಪೇಟೆಯಿಂದ 4.80 ಕಿಮೀ ದೂರದಲ್ಲಿ ಶಾಂತಳ್ಳಿ-ಕಲ್ಕAದೂರು ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ. ಮಡಿಕೇರಿ-ತಲಕಾವೇರಿ ರಸ್ತೆಯಲ್ಲಿ ಬಿದ್ದದ್ದ ಮರವನ್ನು ಭಾಗಮಂಡಲ ವಲಯ ಅರಣ್ಯ ಸಿಬ್ಬಂದಿ ತೆರವು ಮಾಡಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 63.38 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 96.97 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1770.53 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1063.37 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 54.90 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 44.60 ಮಿ.ಮೀ.,
ಪೊನ್ನಂಪೇಟೆ ತಾಲೂಕಿನಲ್ಲಿ 71.94 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 130.05 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 15.40 ಮಿ.ಮೀ. ಸರಾಸರಿ ಮಳೆಯಾಗಿದೆ.

ಮಡಿಕೇರಿ ಕಸಬಾ 24, ನಾಪೋಕ್ಲು 69.20, ಸಂಪಾಜೆ 20, ಭಾಗಮಂಡಲ 106.40, ವಿರಾಜಪೇಟೆ 43, ಅಮ್ಮತ್ತಿ 46, ಹುದಿಕೇರಿ 123.70, ಶ್ರೀಮಂಗಲ 95, ಪೊನ್ನಂಪೇಟೆ 43, ಬಾಳೆಲೆ 26.09, ಸೋಮವಾರಪೇಟೆ ಕಸಬಾ 110.80, ಶನಿವಾರಸಂತೆ 86, ಶಾಂತಳ್ಳಿ 216, ಕೊಡ್ಲಿಪೇಟೆ 105.40, ಕುಶಾಲನಗರ 5.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 25.20 ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯಕ್ಕೆ 10,363 ಕ್ಯೂಸೆಕ್ ನೀರಿನ ಒಳಹರಿವು ಇದೆ. ನದಿಗೆ 7,200 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. 2,859 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಪ್ರಸ್ತುತ 2857.07 ಅಡಿ ನೀರಿನ ಸಂಗ್ರಹ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net