

ಬೆಂಗಳೂರು: ಇಲ್ಲಿಗೆ ಸಮೀಪದ ನೆಲಮಂಗಲದಲ್ಲಿ ಸೋಮವಾರ ಸಂಜೆ ಭಾರಿ ಮಳೆ ಸುರಿಯಿತು. ಸಿಡಿಲಿನ ಆರ್ಭಟಕ್ಕೆ ಸಿಲುಕಿದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅರ್ಫಾನ್ (18) ಮತ್ತು ಸಕ್ಲೈನ್ (16) ಗಾಯಗೊಂಡವರು. ಆಟವಾಡಲು ಹೋದ ಸಂದರ್ಭದಲ್ಲಿ ಭಾರಿ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಇವರು ಬಂಡೆಯ ಆಶ್ರಯ ಪಡೆದುಕೊಂಡಿದ್ದರು.
ದುರದೃಷ್ಟವಶಾತ್ ಆ ಬಂಡೆಗೆ ಸಿಡಿಲು ಅಪ್ಪಳಿಸಿದ್ದರಿಂದ ಇಬ್ಬರು ಗಾಯಗೊಂಡರು ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.