

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆಯಿಂದ ಜೋರು ಮಳೆ ಸುರಿಯಿತು.
ಬೆಳಗಿನ ಜಾವ ನಿಧಾನವಾಗಿ ಆರಂಭವಾದ ಮಳೆ ಬಳಿಕ ಮಧ್ಯಾಹ್ನದವರೆಗೂ ಎಡೆಬಿಡದೆ ಸುರಿಯಿತು. ನಾಪೋಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ. ಇಲ್ಲಿಗೆ ಸಮೀಪದ ಬೇತು ಗ್ರಾಮದ ನಿವಾಸಿ ಪಾರ್ವತಿ ಅವರ ಮನೆಯ ದನದ ಕೊಟ್ಟಿಗೆ ಕುಸಿದು ಬಿದ್ದಿದ್ದು ಶೀಟ್‌ಗಳು ಪುಡಿಪುಡಿಯಾಗಿ ನಷ್ಟ ಸಂಭವಿಸಿದೆ. ದನಗಳನ್ನು ಮೇಯಲು ಬಿಟ್ಟಿದ್ದ ಕಾರಣ ಅಪಾಯದಿಂದ ಪಾರಾಗಿವೆ ಎಂದು ಪಾರ್ವತಿ ಮಾಹಿತಿ ನೀಡಿದ್ದಾರೆ.