ಸುಬ್ರಹ್ಮಣ್ಯ ಮುಂದುವರಿದ ಮಳೆ ಸಂಪರ್ಕ ಕಡಿತ, ಶಾಲಾ ಕಾಲೇಜುಗಳಿಗೆ ರಜೆ

FB_IMG_1659409389840
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನಾದ್ಯಂತ ನೆನ್ನೆ ರಾತ್ರಿಯಿಂದ ವ್ಯಾಪಕ ಮಳೆ ಆಗುತ್ತಿತ್ತು ರಸ್ತೆ ಸಂಪರ್ಕ ಕಡಿತಗೊಂಡಿದೆ.

ರಸ್ತೆ ಸಂಪರ್ಕ ಕಡಿತವಾಗಿ ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಈಗ ಮಳೆ ಪ್ರಮಾಣ ಕಡಿಮೆಯಾಗಿದ್ದು ರಸ್ತೆ ಸಂಪರ್ಕಗಳು ಸಹಜ ಸ್ಥಿತಿಗೆ ಬಂದಿರುತ್ತದೆ. ಆದರೆ ಏನೆಕಲ್ ಭಾಗದಲ್ಲಿ ನಿನ್ನಯಿಂದ ಮಳೆ ಪ್ರಮಾಣ ಜಾಸ್ತಿ ಇದ್ದು ರಸ್ತೆ ಸಂಪರ್ಕ ಕಡಿತವಾಗಿದೆ.


ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮತ್ತು ಊರಿನ ಸುತ್ತಮುತ್ತ ವ್ಯಾಪಕ ಮಳೆ ಆಗಿರುವುದರಿಂದ ದೇವಸ್ಥಾನದ ಒಳಗೆ ಮತ್ತು ಅನೇಕ ಮನೆಗಳಿಗೆ ನೀರು ನುಗ್ಗಿದೆ . ಒಂದು ಮನೆಯ ಮೇಲೆ ಗುಡ್ಡಜರಿದು ಎರಡು ಜನ ಮಕ್ಕಳಾದ ಶ್ರುತಿ ಮತ್ತು ಗಾನಶ್ರೀ ಮರಣ ಹೊಂದಿರುತ್ತಾರೆ.

ನಿನ್ನೆ ರಾತ್ರಿಯಿಂದ ಜಿಲ್ಲಾಧಿಕಾರಿ ಸುಬ್ರಮಣ್ಯದಲ್ಲಿ ಉಪಸ್ಥಿತರಿದ್ದು, ನೆರೆಯ ಪರಿಸ್ಥಿತಿಯನ್ನು ನಿಯಂತ್ರಿಸವಲ್ಲಿ ಎಸಿ ಮತ್ತು ತಹಶೀಲ್ದಾರ್ ಹಾಗೂ ಇತರ ಸಿಬ್ಬಂದಿಗಳ ಜೊತೆಗೆ ಅಗತ್ಯ ಕ್ರಮವನ್ನು ಕೈಗೊಂಡಿರುತ್ತಾರೆ. NDRF ತಂಡ ಈಗಾಗಲೇ ಸುಬ್ರಮಣ್ಯದಲ್ಲಿದ್ದು ಕಾರ್ಯವನ್ನು ನಿರ್ವಹಿಸುತ್ತಿದೆ ಹಾಗೆ SDRF ತಂಡ ಕೊಲ್ಲಮಗುರು ಭಾಗಕ್ಕೆ ಭೇಟಿ ನೀಡಿ ನಂತರ ಸುಬ್ರಹ್ಮಣ್ಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಳುಹಿಸಲಾಗಿದೆ. ಸುಳ್ಯ ಮತ್ತು ಪುತ್ತೂರಿನ ಅಗ್ನಿಶಾಮಕ ತಂಡಗಳು ರಾತ್ರಿಯಿಂದ ಕೊಲ್ಲಮಗರು ಹಾಗೂ ಸುಳ್ಯ ಸುಬ್ರಹ್ಮಣ್ಯದ ಪ್ರದೇಶಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ .

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net