ಕಳಸದಲ್ಲಿ ಭರ್ಜರಿ ಮಳೆ

kls rain
ಕಳಸದಲ್ಲಿ ಮಳೆಗೆ ಕಂಡುಬಂದ ದೃಶ್ಯ
Published on

ಕಳಸ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಭಾಗಗಳಲ್ಲಿ ಗಾಳಿ, ಗುಡುಗಿನೊಂದಿಗೆ ಭಾರಿ ಮಳೆಯಾಗಿದೆ.

ಕೆಲ ದಿನಗಳಿಂದ ಮಧ್ಯಾಹ್ನವಾಗುತ್ತಿದ್ದಂತೆ ಮೋಡವಾಗಿ ವರ್ಷಧಾರೆಯಾಗುವ ಸ್ಥಿತಿ ಕಂಡುಬರುತ್ತಿತ್ತು. ಶನಿವಾರ ಬೆಳಗ್ಗೆಯಿಂದ ಬಿಸಿಲ ಧಗೆಯಿಂದ ಜನ ಹೈರಾಣಾಗಿದ್ದರು. ಆದರೆ ಮಧ್ಯಾಹ್ನ ಭರ್ಜರಿಯಾಗಿ ಮಳೆಯಾಯಿತು. ಕಳಸ, ಬಾಳೆಹೊಳೆ, ಹಳುವಳ್ಳಿ, ಮುನ್ನೂರ್‌ಪಾಲ್, ಮರಸಣಿಗೆ, ಹಿರೇಬೈಲ್, ಸಂಸೆ, ಕುದುರೆಮುಖ, ಹೊರನಾಡು ಭಾಗಗಳಲ್ಲಿ ಮಳೆಯಾಯಿತು. ಸಂಜೆಯಾಗುತ್ತಿದ್ದಂತೆ ತಂಪಾದ ವಾತಾವರಣ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net