ಹುಬ್ಬಳ್ಳಿಯಲ್ಲಿ ಭಾರಿ ಮಳೆ, ಹಲವು ರಸ್ತೆಗಳು ಜಲಾವೃತ, ಭಾಗಶಃ ಮನೆ ಕುಸಿತ

IMG-20241010-WA0004.jpg
Published on

ಹುಬ್ಬಳ್ಳಿ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಿಂಗಾರು ಆರ್ಭಟ ಜೋರಾಗಿದೆ.

ಬುಧವಾರ ಸಂಜೆಯಿಂದ ಆರಂಭವಾದ ಜಡಿ ಮಳೆ ಇಡೀ ರಾತ್ರಿ ಸುರಿದಿದೆ. ದಾಖಲೆ ಎಂಬಂತೆ ಹುಬ್ಬಳ್ಳಿ ಹಾಗೂ ಛಬ್ಬಿ ಹೋಬಳಿಯಲ್ಲಿ ಈ ವರ್ಷದ ಅತ್ಯಂತ ಹೆಚ್ಚು ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ ೭೨.೫ ಎಂ.ಎಂ. ಹಾಗೂ ಛಬ್ಬಿ ಹೋಬಳಿಯಲ್ಲಿ ೭೬.೮ ಎಂ.ಎಂ. ಮಳೆ ದಾಖಲಾಗಿದೆ. ಇದು ಈ ವರೆಗಿನ ಅತಿ ಹೆಚ್ಚು ಮಳೆ ಎಂದು ಹೇಳಲಾಗಿದೆ. ಶಿರಗುಪ್ಪಿ ೨೩.೬ ಹಾಗೂ ಬ್ಯಾಹಟ್ಟಿಯಲ್ಲಿ ೩೦ ಎಂಎಂ ಮಳೆಯಾಗಿದೆ.

ಬು. ಅರಳಿಕಟ್ಟಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬೆಳಗಲಿ ನೂಲ್ವಿ ರಸ್ತೆ  ಸೇತುವೆ ಹಾಗೂ  ಕುಸುಗಲ್ಲ ಇಂಗಳಹಳ್ಳಿ ರಸ್ತೆಯಲ್ಲಿ ಬೆಣ್ಣೆಹಳ್ಳ ಉಕ್ಕಿ ಹರಿದು ಸಂಚಾರ ಬಂದ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net